ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಟಾನ್ಫರ್ಡ್: ಕೆಲಸ ಕಳೆದುಕೊಂಡ 1000 ಮಂದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಟಾನ್ಫರ್ಡ್: ಕೆಲಸ ಕಳೆದುಕೊಂಡ 1000 ಮಂದಿ
ಹೌಸ್ಟನ್: ಟೆಕ್ಸಾಸ್ ಬಿಲಿಯನೇರ್ ಆರ್.ಅಲೆನ್ ಸ್ಟಾನ್ಫರ್ಡ್ ಸ್ಥಾಪಿಸಿದ ಸ್ಟಾನ್ಫರ್ಡ್ ಫೈನಾನ್ಶಿಯಲ್ ಗ್ರೂಪ್ ಸಂಸ್ಥೆಯಲ್ಲಿ ಹೂಡಿಕೆ ಸಂಬಂಧ ತೊಂದರೆಗೊಳಗಾಗಿ ತೂಗುಯ್ಯಾಲೆಯಲ್ಲಿದ್ದ 1,000 ನೌಕರರು ಈಗ ಕೆಲಸ ಕಳೆದುಕೊಂಡಿದ್ದಾರೆ.

ಕೋರ್ಟ್ ಮೆಟ್ಟಿಲು ಹತ್ತಿದ್ದ ಈ ವಿವಾದದ ಸಂಬಂಧ ಕೋರ್ಟ್ ರಿಸೀವರ್ ಒಬ್ಬರನ್ನು ನೇಮಿಸಿತ್ತು. ಹಲವು ವಿಮರ್ಶೆಗಳ ನಂತರ ವಿವಾದದಲ್ಲಿ ಸಿಲುಕಿದ್ದ 1000 ಮಂದಿ ನೌಕರರನ್ನು ಮತ್ತೆ ಕೆಲಸದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಇದು ಕಂಪನಿಯ ಕಾನೂನು ರೀತಿಯಿಂದ ಹಾಗೂ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಜತೆಗೆ ಈ ಕೆಲಸಗಾರರನ್ನು ಮುಂದುವರಿಸಲು ಕಂಪನಿಯ ಬಳಿ ಸಾಕಷ್ಟು ಬಂಡವಾಳವಿಲ್ಲ ಎಂದು ರಿಸೀವರ್ ಹೇಳಿದ್ದಾರೆ.

ಈ ಹೇಳಿಕೆಯ ಪರಿಣಾಮ ಇದೀಗ ಶೇ.85ರಷ್ಟು ಸ್ಟಾನ್ಫರ್ಡ್ ಅಮೆರಿಕ ನೌಕರರ ಮೇಲೆ ಬೀರಿದೆ. ಸ್ಟಾನ್ಫರ್ಡ್‌ನ ಬ್ಯುಸಿನೆಸ್ ವಲಯ ಸಂಪೂರ್ಣವಾಗಿ ನಿಲ್ಲಿಸಲಿದ್ದು, ಕೆಲಸ ಕಳೆದುಕೊಳ್ಳದೆ ಉಳಿದ ನೌಕರರನ್ನು ಸ್ಟಾನ್ಫರ್ಡ್‌ನ ಮುಖ್ಯ ಕಚೇರಿಗೆ ಸ್ಥಳಾಂತರಿಸಲಾತ್ತದೆ ಎಂದು ಹೇಳಲಾಗಿದೆ. ಈ ನಿಯಮ ಈಗಿನಿಂದಲೇ ಜಾರಿಗೆ ಬಂದಿದ್ದು, ಕೆಲಸ ಕಳೆದುಕೊಂಡವರು ವೇತನ, ಸಂಸ್ಥೆಯ ಉಳಿದ ಸವಲತ್ತುಗಳು ಎಲ್ಲವುಗಳನ್ನು ಈಗಿನಿಂದಲೇ ಕಳೆದುಕೊಳ್ಳಬೇಕಾಗುತ್ತದೆ. ಅದನ್ನು ನೀಡಲಾಗುವುದಿಲ್ಲ ಎಂದು ರಿಸೀವರ್ ವರದಿ ಹೇಳಿದೆ.

ದಿ ಸೆಕ್ಯೂರಿಟಿಸ್ ಅಂಡ್ ಎಕ್ಸ್‌ಚೇಂಜ್ ಕಮಿಶನ್ ಸ್ಟಾನ್ಫರ್ಡ್ ಹಾಗೂ ಫೈನಾನ್ಸ್ ಮುಖ್ಯಸ್ಥ ಎಂ.ಡೇವಿಸ್ ಅವರನ್ನು ಅಪರಾಧಿಗಳೆಂದು ಹೇಳಿದೆ. ಅವರು ಹೂಡಿಕೆದಾರರ ಬಿಲಿಯನ್‌ಗಟ್ಟಲೆ ಡಾಲರ್‍‌ಗಳನ್ನು ಗುಳುಂ ಮಾಡಿದ್ದಲ್ಲದೆ, ತಪ್ಪು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನೀಡಿದ್ದಕ್ಕೆ ಕಳೆದ ತಿಂಗಳು ದಲ್ಲಾಸ್‌ನ ಫೆಡರಲ್ ಕೋರ್ಟಲ್ಲಿ ಕೇಸು ದಾಖಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೆಪ್ಸಿ, ಕೋಕ್‌ಗೆ ಸವಾಲು: ಗೋಮೂತ್ರ ಸಾಫ್ಟ್‌ಡ್ರಿಂಕ್!
ವಿಶ್ವದ 62 ಆರ್ಥಿಕ ಕೇಂದ್ರಗಳಲ್ಲಿ ಮುಂಬೈಗೆ 49ನೇ ಸ್ಥಾನ
ಏರ್ ಇಂಡಿಯಾ ವೇಳಾಪಟ್ಟಿ ಬದಲಾವಣೆ
ಮದ್ಯ ಬಗ್ಗೆ ಮಾಹತಿ ನೀಡಿ: ಬಹುಮಾನ ಗೆಲ್ಲಿರಿ..!
ಚಿನ್ನದ ದರ ಮತ್ತೆ ಏರಿಕೆ
'ಭಾರತದಲ್ಲಿ ರಫ್ತು ನಿಷೇಧದಿಂದ ತೃತೀಯ ವಿಶ್ವಕ್ಕೆ ಹಾನಿ'