ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಹಿಳಾ ದಿನಾಚರಣೆಗೆ ಮಹಿಳೆಯರದೇ ಚಾನೆಲ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳಾ ದಿನಾಚರಣೆಗೆ ಮಹಿಳೆಯರದೇ ಚಾನೆಲ್!
ಇದು ಮಹಿಳೆಯರಿಂದ ಮತ್ತು ಎಲ್ಲರಿಗಾಗಿ ಇರುವ 24 ಗಂಟೆಗಳ ಮಹಿಳಾ ಚಾನೆಲ್. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಬಹುತೇಕ ಮಹಿಳೆಯರೇ ಇರುವ, ಮಹಿಳಾ ಕೇಂದ್ರಿತ ಕಾರ್ಯಕ್ರಮಗಳಿರುವ ಚಾನೆಲ್ ಒಂದು ಅಸ್ತಿತ್ವಕ್ಕೆ ಬರುತ್ತಿದೆ.

ಸಮಾಜದ ಎಲ್ಲ ವರ್ಗದ ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ತೆರೆದುಕೊಳ್ಳಲಿರುವ ಈ 'ಫೋಕಸ್ ಟಿವಿ', ಏಷ್ಯಾದ ಪ್ರಪ್ರಥಮ ಮಹಿಳಾ ಆಧಾರಿತ ಚಾನೆಲ್ ಎಂದು ಅದರ ಅಧಿಕಾರಿಗಳು ತಿಳಿಸಿದ್ದಾರೆ.

ಫೋಕಸ್ ಟಿವಿಯು ಮಹಿಳೆಯರ ಸಾಮರ್ಥ್ಯ, ಅವರ ಸಾಧನೆಗಳನ್ನು ರಾಷ್ಟ್ರೀಯವಾಗಿ ಮಾತ್ರವಲ್ಲ, ಜಾಗತಿಕವಾಗಿ ಬಿಂಬಿಸುತ್ತದೆ ಮತ್ತು ಆಚರಿಸುತ್ತದೆ. ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸಲು, ಮಹಿಳೆಯರು ನಮ್ಮ ಚಾನೆಲ್ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು, ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು, ಮತ್ತು ನ್ಯಾಯಕ್ಕಾಗಿನ ಹೋರಾಟದಲ್ಲಿ ಅವರು ಏಕಾಂಗಿಯಲ್ಲ ಎಂಬುದನ್ನು ತಿಳಿಯಪಡಿಸುವ ಉದ್ದೇಶದಿಂದ ಈ ಚಾನೆಲ್ ಕಾರ್ಯನಿರ್ವಹಿಸಲಿದೆ ಎಂದು ಫೋಕಸ್ ಟಿವಿಯ ಉಪ ವ್ಯವಸ್ಥಾಪಕ ಸಂಪಾದಕಿ ನೀಲಾಂಜನ ಬ್ಯಾನರ್ಜಿ ತಿಳಿಸಿದ್ದಾರೆ.

ಮಹಿಳೆಯರನ್ನು ಪೂಜ್ಯಭಾವದಿಂದ ಕಾಣುತ್ತಿರುವ, ಗೌರವದಿಂದ ನೋಡುತ್ತಿರುವ ಭಾರತದಲ್ಲಿ, ಅವರ ಮೇಲೆ ದೌರ್ಜನ್ಯ, ತುಳಿತ, ಹಿಂಸೆಯನ್ನೂ ಮಾಡಲಾಗುತ್ತಿದೆ ಎನ್ನುತ್ತಾರೆ ಬ್ಯಾನರ್ಜಿ.

ಸ್ತ್ರೀ-ಪುರುಷ ಸಮಾನತೆ ಎಂಬುದು ಕೈಗೆಟುಕದ ಕನಸಾಗಿಯೇ ಉಳಿದಿದೆ. ಆದರೆ ಕಾಲವೀಗ ಬದಲಾಗುತ್ತಿದೆ. ಈ ಶತಮಾನದಲ್ಲಿ ಹೆಣ್ಣು ಉತ್ತಮ ಕೊಡುಗೆದಾರಳಾಗಿ, ಪಾಲುದಾರಳಾಗಿ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೈಯಾಡಿಸುತ್ತಿದ್ದಾಳೆ ಎಂದು ಅವರು ಹೇಳುತ್ತಾರೆ.

ಫೋಕಸ್ ಟಿವಿಯು ಎನ್ಇ ಟಿವಿ, ಎನ್ಇ ಬಾಂಗ್ಲಾ ಮತ್ತು ಎನ್ಇ ಹೈಫೈ ಟಿವಿ ಚಾನೆಲ್‌ಗಳನ್ನು ನಡೆಸುತ್ತಿರುವ ನಾರ್ತ್-ಈಸ್ಟ್ ಟಿವಿ ಸಮೂಹದ ಅಂಗಸಂಸ್ಥೆ. ಇದರ ಸಿಬ್ಬಂದಿಗಳಲ್ಲಿ ಶೇ.90ರಷ್ಟೂ ಮಹಿಳೆಯರದೇ ಪಾಲು.

ಪ್ರಮುಖ ಡಿಟಿಎಚ್ ವೇದಿಕೆಗಳಲ್ಲಿ ಮತ್ತು ಕೇಬಲ್ ಜಾಲಗಳಲ್ಲಿ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಈ ಚಾನೆಲ್ ಲಭ್ಯವಿರುತ್ತದೆ. ಇದರಲ್ಲಿ ಬಹುತೇಕ ಕಾರ್ಯಕ್ರಮಗಳು ಮಹಿಳಾ ಪ್ರಧಾನವಾಗಿದ್ದರೂ, ಚಾನೆಲ್ ಎಲ್ಲರಿಗೂ ಸಲ್ಲುವಂತಿರುತ್ತದೆ.

ಪ್ರತಿಯೊಂದು ವರದಿಯನ್ನು ಮಹಿಳಾ ಮನೋಭಾವದಿಂದ ನೋಡುವುದು ನಮಗೆ ಅತಿದೊಡ್ಡ ಸವಾಲಿನ ಕೆಲಸ. ಇದು ಮಹಿಳೆಯರಿಂದ ನಡೆಸಲ್ಪಡುವ ಚಾನೆಲ್ ಆಗಿದ್ದರೂ, ಎಲ್ಲರೂ ನೋಡುವಂತಾಗುತ್ತದೆ ಎನ್ನುತ್ತಾರೆ ಅದರ ಔಟ್‌ಪುಟ್ ವಿಭಾಗದ ಮುಖ್ಯಸ್ಥೆ ಅನುಭೂತಿ ಕೌಲ್.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಟಾನ್ಫರ್ಡ್: ಕೆಲಸ ಕಳೆದುಕೊಂಡ 1000 ಮಂದಿ
ಪೆಪ್ಸಿ, ಕೋಕ್‌ಗೆ ಸವಾಲು: ಗೋಮೂತ್ರ ಸಾಫ್ಟ್‌ಡ್ರಿಂಕ್!
ವಿಶ್ವದ 62 ಆರ್ಥಿಕ ಕೇಂದ್ರಗಳಲ್ಲಿ ಮುಂಬೈಗೆ 49ನೇ ಸ್ಥಾನ
ಏರ್ ಇಂಡಿಯಾ ವೇಳಾಪಟ್ಟಿ ಬದಲಾವಣೆ
ಮದ್ಯ ಬಗ್ಗೆ ಮಾಹತಿ ನೀಡಿ: ಬಹುಮಾನ ಗೆಲ್ಲಿರಿ..!
ಚಿನ್ನದ ದರ ಮತ್ತೆ ಏರಿಕೆ