ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 21ನೆ ಶತಮಾನ ಭಾರತದ್ದು: ಮುಖೇಶ್ ಅಂಬಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
21ನೆ ಶತಮಾನ ಭಾರತದ್ದು: ಮುಖೇಶ್ ಅಂಬಾನಿ
ಭಾರತೀಯ ಅಭಿವೃದ್ಧಿಯು ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ 21ನೆ ಶತಮಾನವು ಭಾರತೀಯ ಶತಮಾನವಾಗಲಿದೆ ಎಂದು ಉದ್ಯಮಿ ಮುಖೇಶ್ ಅಂಬಾನಿ ಹೇಳಿದ್ದಾರೆ.

ಜನಸಂಖ್ಯಾ ವಿಚಾರವಾಗಿ ವಿಶ್ವಕ್ಕೆ ವಯಸ್ಸಾಗುತ್ತಿದ್ದರೆ, ಭಾರತವು ಯೌವನ ಪಡೆಯುತ್ತಿದ್ದು, ಅದು ರಾಷ್ಟ್ರದ ಶಕ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ದಶಕ ಮತ್ತು ಮುಂಬರುವ ದಶಕಗಳಲ್ಲಿ, ವಿಶ್ವಕ್ಕೆ ವಯಸ್ಸಾಗುತ್ತಿರುವಂತೆ ಭಾರತವು ಯೌವ್ವನದತ್ತ ಸಾಗುತ್ತದೆ ಎಂದು ಅವರು ವಾಣಿಜ್ಯ ಸಮ್ಮೇಳನ ಒಂದರಲ್ಲಿ ಮಾತನಾಡುತ್ತಾ ಅಭಿಪ್ರಾಯಿಸಿದ್ದಾರೆ.

ಭಾರತದ 100 ಕೋಟಿ ಜನಸಂಖ್ಯೆಯಲ್ಲಿ ಶೇ.44ರಷ್ಟು ಮಂದಿ 19ರೊಳಗಿನ ಹರೆಯದವರು. ಮುಂದಿನ 20 ವರ್ಷಗಳಲ್ಲಿ ನಮ್ಮ ಜನಸಂಖ್ಯೆಯಲ್ಲಿ 400 ಮಿಲಿಯನ್ ಮಂದಿ 35ರೊಳಗಿನ ಹರೆಯದವರಾಗಿರುತ್ತಾರೆ. ಹಾಗೂ ಈ ದಶಕದಿಂದ ಕೇವಲ ಶೇ.10ರಷ್ಟು ಮಂದಿ ಮಾತ್ರ 60ರ ಹರೆಯಕ್ಕಿಂತ ಮೇಲ್ಪಟ್ಟವರು ಎಂದು ಅವರು ನುಡಿದರು.

ನಾಲ್ಕು ಪ್ರವೃತ್ತಿಗಳು ವಿಶ್ವದ ಚಾಲನೆಗೆ ಕಾರಣವಾಗಿದ್ದು ಅದರಲ್ಲಿ ಜನಸಂಖ್ಯೆಯೂ ಒಂದಾಗಿದ್ದು ಇದರ ಪ್ರಯೋಜನವನ್ನು ಭಾರತ ಪಡೆಯಲಿದೆ ಎಂದು ಅವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಕಾರ್ಯತಂತ್ರ
ಶೇಕಡಾ 7ರಷ್ಟು ವೃದ್ದಿ: ಕಾಮತ್
ಮ‌ೂಲ ಸೌಕರ್ಯ ಮ‌ೂಲಕ ಜಿಡಿಪಿ ದ್ವಿಗುಣ
ಒಂದೇ ತಿಂಗಳಲ್ಲಿ 6.5 ಲಕ್ಷ ಉದ್ಯೋಗಿಗಳು ಬೀದಿಗೆ!
ಸ್ಕಾರ್ಪಿಯೋ ಬೆಲೆ ಕಡಿತ
ಒಪೆಲ್ ಸ್ಥಾವರ ಮುಚ್ಚುವ ಬೆದರಿಕೆ