ದೇಶದ ವಾಹನೋದ್ಯಮದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಫೆಬ್ರವರಿ 2009ಕ್ಕೆ ಅಂತ್ಯಗೊಂಡಂತೆ ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಶೇ.21.8 ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. 2008 ರ ಫೆಬ್ರವರಿ ತಿಂಗಳಲ್ಲಿ 94,757 ಪ್ರಯಾಣಿಕ ಕಾರುಗಳ ಮಾರಾಟವಾಗಿದ್ದು, ಪ್ರಸಕ್ತ ವರ್ಷದ ಫೆಬ್ರವರಿ ತಿಂಗಳಲ್ಲಿ 115,386 ಕಾರುಗಳ ಮಾರಾಟವಾಗಿವೆ ಎಂದು ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್ ಪ್ರಕಟಿಸಿದೆ. ಕಳೆದ ವರ್ಷ 425.089 ದ್ವಿಚಕ್ರವಾಹನ ಮಾರಾಟವಾಗಿದ್ದು, ಪ್ರಸಕ್ತ ವರ್ಷದಲ್ಲಿ ಮಾರಟದಲ್ಲಿ ಶೇ.15.6 ರಷ್ಟು ವೃದ್ಧಿಯಾಗಿ 491,462 ವಾಹನಗಳು ಮಾರಾಟವಾಗಿವೆ ಎಂದು ಸಿಯಾಮ್ ಅಧಿಕೃತ ಅಂಶಗಳನ್ನು ಬಿಡುಗಡೆ ಮಾಡಿದೆ. ಆದರೆ ಕಳೆದ ವರ್ಷ ವಾಣಿಜ್ಯಿಕ 45,478 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಶೇ.31.7 ರಷ್ಟು ಕುಸಿತ ಕಂಡು 31,069 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಸಿಯಾಮ್ ಪ್ರಕಟಿಸಿದೆ. |