ಏಷ್ಯಾ ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ಬಂಡವಾಳದ ಹೊರಹರಿವು ಹೆಚ್ಚಳವಾಗಲಿದೆ ಎನ್ನುವ ಆತಂಕದಲ್ಲಿ ಹೂಡಿಕೆದಾರರು ಡಾಲರ್‌ಗಳ ಖರೀದಿಯಲ್ಲಿ ತೊಡಗಿದ್ದರಿಂದ ರೂಪಾಯಿ ಮೌಲ್ಯ 5 ಪೈಸೆ ಕುಸಿತ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್‌ಗೆ 51.75 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ಗೆ 5 ಪೈಸೆ ಕುಸಿತ ಕಂಡಿದ್ದರಿಂದ 51.70 ರೂ.ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಶೇರುಪೇಟೆ ಕುಸಿತದಿಂದಾಗಿ ನೂತನ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳಿರುವುದರಿಂದ ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆ ಏರಿಕೆಯಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಷ್ಯಾ ಮಾರುಕಟ್ಟೆಗಳಾದ ಜಪಾನ್‌ನ ನಿಕೈ ಶೇ.1.45 ರಷ್ಟು ಕುಸಿತ ಕಂಡಿದ್ದು,ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇ.1.64 ರಷ್ಟು ಇಳಿಕೆಯಾಗಿದೆ. |