ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೊರಗುತ್ತಿಗೆ ಕುರಿತಂತೆ ಮೃದು ಧೋರಣೆ ತಳೆದ ಹಿನ್ನೆಲೆಯಲ್ಲಿ ಭಾರತ ಹೊರಗುತ್ತಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ಗ್ಲೋಬಲ್ ಫೈನಾನ್ಶಿಯಲ್ ಫರ್ಮ್ ಮೂಡಿ ಹೇಳಿಕೆ ನೀಡಿದೆ.
ಭಾರತದಲ್ಲಿ ವಿದೇಶಿ ಉದ್ಯೋಗಿಗಳಿಗೆ ಹೋಲಿಸಿದಲ್ಲಿ ಕಡಿಮೆ ವೇತನದಲ್ಲಿ ದುಡಿಯುವ ಪ್ರತಿಭಾವಂತ ಉದ್ಯೋಗಿಗಳು ತಾಂತ್ರಿಕ ಪರಿಣಿತಿಯಿಂದಾಗಿ ಭಾರತ ಹೊರಗುತ್ತಿಗೆ ಸೇವೆಯಲ್ಲಿ ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿರಲಿದೆ ಎಂದು ಮೂಡಿ ಸಂಸ್ಥೆಯ ಆರ್ಥಿಕ ತಜ್ಞರಾದ ಶೆರ್ಮಾನ್ ಚಾನ್ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಹೊರಗುತ್ತಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ವಹಿವಾಟು ಪ್ರಸಕ್ತ ಸ್ಥಿತಿಯಲ್ಲಿ ಕುಸಿತ ಕಂಡಿರಬಹುದು.ಆದರೆ ಮುಂಬರುವ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ವೈಭವ ಮರುಕಳಿಸಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅಧಿಕಾರವಹಿಸಿಕೊಂಡ ನಂತರ ಸಂಸತ್ತಿನಲ್ಲಿ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಅಡಳಿತ ಹೊರಗುತ್ತಿಗೆ ಸೇವೆ ನೀಡುವ ಕಂಪೆನಿಗಳಿಗೆ ತೆರಿಗೆ ವಿಧಿಸಲಿದೆ ಎಂದು ಹೇಳಿಕೆ ನೀಡಿ ಹೊರಗುತ್ತಿಗೆ ಸೇವಾ ಕಂಪೆನಿಗಳಿಗೆ ಆತಂಕ ಮೂಡಿಸಿದ್ದರು. |