ಪಾಕಿಸ್ತಾನದಲ್ಲಿ ಎದುರಾದ ಅರಾಜಕತೆ ಸ್ಥಿತಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಣ ವಹಿವಾಟು 900 ಮಿಲಿಯನ್ ಡಾಲರ್‌ಗಳಿಂದ ಶೇ.60 ರಷ್ಟು ಕುಸಿತ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ರಫ್ತು ವಹಿವಾಟುದಾರರು ಪಾಕಿಸ್ತಾನಕ್ಕೆ ತೆರಳಿ ವಹಿವಾಟು ಒಪ್ಪಂದ ಮಾಡಿಕೊಳ್ಳದಂತಹ ಸ್ಥಿತಿ ಪಾಕಿಸ್ತಾನದಲ್ಲಿ ನಿರ್ಮಾಣವಾಗಿರುವುದರಿಂದ ಉಭಯ ದೇಶಗಳ ನಡುವಣ ವಹಿವಾಟು ಕೇವಲ 2 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಅಧ್ಯಯನದ ವರದಿಯಲ್ಲಿ ಪ್ರಕಟಿಸಲಾಗಿದೆ.
ದೇಶದ ಕೈಗಾರಿಕೋದ್ಯಮದ ಸಂಸ್ಥೆ ಎಫ್‌ಐಸಿಸಿಐ, ಪಾಕಿಸ್ತಾನದೊಂದಿಗೆ ವಹಿವಾಟು ನಡೆಸುವ ಅಮುದುದಾರರು ಹಾಗೂ ರಫ್ತುದಾರರು ವಹಿವಾಟಿನ ಕುರಿತಂತೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ.
ಭಾರತ-ಪಾಕ್ ಮಧ್ಯೆ, ಜವಳಿ ಮತ್ತು ಸಿದ್ದ ಉಡುಪು, ಜವಳಿ ಯಂತ್ರೋಪಕರಣ, ಹತ್ತಿ ಬಟ್ಟೆ, ಕೃಷಿ ಉತ್ಪನ್ನಗಳು,ದ್ವಿದಳ ಧಾನ್ಯಗಳು, ಉಕ್ಕು ಮತ್ತು ರಸಾಯನಿಕ ವಸ್ತುಗಳ ವಹಿವಾಟಿನಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿವೆ ಎಂದು ಎಫ್‌ಐಸಿಸಿಐ ಹೇಳಿಕೆ ನೀಡಿದೆ. |