ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್‌ನಿಂದ ಮುಂಬೈ-ಕುವೈತ್‌ಗೆ ನೇರ ವಿಮಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್‌ನಿಂದ ಮುಂಬೈ-ಕುವೈತ್‌ಗೆ ನೇರ ವಿಮಾನ
PTI
ಭಾರತದಿಂದ ಕುವೈತ್‌ಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಜೆಟ್‍‌ಏರ್‌ವೇಸ್ ಮುಂಬೈನಿಂದ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಮಾರ್ಚ್ 29 ರಿಂದ ಭಾರತದಿಂದ ಕುವೈತ್‌ಗೆ ನೂತನ ವಿಮಾನಯಾನ ಸೇವೆ ಆರಂಭವಾಗಲಿದ್ದು, ಬೋಯಿಂಗ್ 737-800 ವಿಮಾನಗಳನ್ನು ಒದಗಿಸಲಾಗುವುದು ಎಂದು ಜೆಟ್ ಏರ್‌ವೇಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ-ಗಲ್ಫ್ ರಾಷ್ಟ್ರಗಳಲ್ಲಿ ಜೆಟ್ ಏರ್‌ವೇಸ್‌ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದು, ಗುಣಮಟ್ಟ ಹಾಗೂ ಪ್ರಯಾಣಿಕರ ಸೇವೆಯಲ್ಲಿ ಮೆಚ್ಚುಗೆ ಗಳಿಸಿದೆ ಎಂದು ಜೆಟ್ ಏರ್‌ವೇಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೊಲ್ಫ್‌ಗಾಂಗ್ ಪ್ರೋಕ್ -ಸೆಶರ್ ಹೇಳಿದ್ದಾರೆ.

ಮುಂಬೈನಿಂದ ಕುವೈತ್‌ಗೆ ನೇರ ವಿಮಾನ ಸೌಲಭ್ಯ ಪ್ರಯಾಣಿಕರ ಜನಪ್ರಿಯತೆ ಪಡೆಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬೈನಿಂದ ಕುವೈತ್‌ಗೆ ಪ್ರಯಾಣಿಸುವ ವಿಮಾನ ಸಂಜೆ 7 ಗಂಟೆಗೆ ಮುಂಬೈನಿಂದ ತೆರಳಲಿದ್ದು, ಕುವೈತ್‌ಗೆ 8.30ಕ್ಕೆ ತಲುಪಲಿದೆ. ಕುವೈತ್‌ನಿಂದ 9.30 ಗಂಟೆಗೆ ನಿರ್ಗಮಿಸುವ ವಿಮಾನ ಬೆಳಗಿನ ಜಾವ 4 ಗಂಟೆಗೆ ತಲುಪಲಿದೆ ಎಂದು ಜೆಟ್ ಏರ್‌ವೇಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆಟ್, ಮುಂಬೈ, ಕುವೈತ್, ನೇರ ವಿಮಾನ
ಮತ್ತಷ್ಟು
ಜಾಗತಿಕ ಆರ್ಥಿಕತೆ ಕುಸಿಯುತ್ತಿದೆ:ವಿಶ್ವಬ್ಯಾಂಕ್
ಭಾರತ-ಪಾಕ್ ವಹಿವಾಟು ಶೇ.60 ರಷ್ಟು ಕುಸಿತ
ಹೊರಗುತ್ತಿಗೆಯಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ
ಫಾರೆಕ್ಸ್ : ರೂಪಾಯಿ ಮೌಲ್ಯ ಕುಸಿತ
ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಏರಿಕೆ
ಉತ್ಪಾದನಾ ವಲಯ ಅಭಿವೃದ್ಧಿ : ಫಿಕ್ಕಿ