ಸರಕಾರ ತೈಲ ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಕಡಿತ ಘೋಷಿಸಿದ್ದರಿಂದ ಮಾರ್ಚ್ ತಿಂಗಳಾಂತ್ಯಕ್ಕೆ ಹಣದುಬ್ಬರ ದರ ಶೂನ್ಯಕ್ಕೆ ಇಳಿಕೆಯಾಗಲಿದೆ ಎಂದು ಎಕ್ಸಿಸ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ 21ಕ್ಕೆ ಅಂತ್ಯಗೊಂಡಂತೆ ಸಗಟು ಸೂಚ್ಯಂಕ ದರ ಶೇ.3.03 ರ ಗಡಿಯನ್ನು ತಲುಪಿದೆ. ಕಳೆದ ಅಗಸ್ಟ್ ತಿಂಗಳಲ್ಲಿ ಶೇ.13 ರಷ್ಟಿದ್ದ ಹಣದುಬ್ಬರ ದರ ಪ್ರಸ್ತುತ ವಾರದಲ್ಲಿ ಶೇ.3.36ಕ್ಕೆ ಇಳಿಕೆಯಾಗಿದೆ. ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತ ಮಾಡಿದ್ದು, 200ರಲ್ಲಿ ನಿಯಮಗಳನ್ನು ಜಾರಿಗೆ ತಂದ ನಂತರ ಪ್ರಥಮ ಬಾರಿಗೆ ಕಡಿತ ಮಾಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. |