ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನಿಂದ ಖರೀದಿ ಬಿಡ್ ಅಹ್ವಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನಿಂದ ಖರೀದಿ ಬಿಡ್ ಅಹ್ವಾನ
PTI
ವಂಚನೆ ಪೀಡಿತ ಸತ್ಯಂ ಸಂಸ್ಥೆಯನ್ನು ಖರೀದಿಸ ಬಯಸುವ ಹೂಡಿಕೆದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಸತ್ಯಂ ಅಡಳಿತ ಮಂಡಳಿ ಚಾಲನೆ ನೀಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸತ್ಯಂ ಕಂಪ್ಯೂಟರ್ ಸರ್ವಿಸಸ್ ಇತ್ತೀಚೆಗೆ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿಯಿಂದ ಕಂಪೆನಿಯ ಶೇ.51 ರಷ್ಟು ಶೇರುಗಳನ್ನು ಮಾರಾಟ ಮಾಡಲು ಅನುಮತಿ ಪಡೆದಿದೆ. ಸತ್ಯಂ ಬಿಡ್‌ನಲ್ಲಿ ಮೂಲದರ ನಿಗದಿಯಾಗಿರುವುದಿಲ್ಲ. ಸತ್ಯಂ ಶೇರುಗಳು ಖರೀದಿಸಬಯಸುವ ಆಸಕ್ತರು ಮಾರ್ಚ್‌ 12 ರೊಳಗೆ ಕಂಪೆನಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಿಡ್‌ದಾರರು ಇಒಎಲ್‌ಗಳು , ಮಾರ್ಚ್ 20 ರೊಳಗೆ ಕನಿಷ್ಟ 1500 ಕೋಟಿ ರೂಪಾಯಿ ಹೂಡಿಕೆ ಸಾಮರ್ಥ್ಯದ ಸಾಕ್ಷಿಯನ್ನು ಸಲ್ಲಿಸಬೇಕಾಗಿದೆ ಎಂದು ಸತ್ಯಂ ತಿಳಿಸಿದೆ.

ಸತ್ಯಂ ಅಡಳಿತ ಮಂಡಳಿ ಬಿಡ್‌ದಾರರ ಅರ್ಹತೆಗೆ ತಕ್ಕಂತೆ ಕೆಲ ಬಿಡ್‌ದಾರರನ್ನು ಅಂತಿಮಗೊಳಿಸಲಿದೆ ಎಂದು ಸತ್ಯಂ ಅಡಳಿತ ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯಂ, ಖರೀದಿ, ಬಿಡ್, ಅಹ್ವಾನ
ಮತ್ತಷ್ಟು
ಮಾರ್ಚ್ ಅಂತ್ಯಕ್ಕೆಹಣದುಬ್ಬರ ದರ ಶೂನ್ಯ
ಜೆಟ್‌ನಿಂದ ಮುಂಬೈ-ಕುವೈತ್‌ಗೆ ನೇರ ವಿಮಾನ
ಜಾಗತಿಕ ಆರ್ಥಿಕತೆ ಕುಸಿಯುತ್ತಿದೆ:ವಿಶ್ವಬ್ಯಾಂಕ್
ಭಾರತ-ಪಾಕ್ ವಹಿವಾಟು ಶೇ.60 ರಷ್ಟು ಕುಸಿತ
ಹೊರಗುತ್ತಿಗೆಯಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ
ಫಾರೆಕ್ಸ್ : ರೂಪಾಯಿ ಮೌಲ್ಯ ಕುಸಿತ