ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‌ಬಿಎಂ) ಮನೆ ನಿರ್ಮಿಸುವವರಿಗೆ ಹಾಗೂ ವಾಹನ ಖರೀದಿಸುವವರಿಗಾಗಿ ವಿಶೇಷ ಬಡ್ಡಿದರ ಪ್ರಕಟಿಸಿದ್ದು, ಮಾರ್ಚ್ 11ರಿಂದ ಏಪ್ರಿಲ್ 30ರ ಅವಧಿಯಲ್ಲಿ ಯಾವುದೇ ಮೊತ್ತದ ಗೃಹಸಾಲ ಪಡೆದರೂ ಶೇಕಡಾ 8ರ ಬಡ್ಡಿದರ ಹಾಗೂ ಮಾರ್ಚ್ 9ರಿಂದ ಮೇ 31ರ ಅವಧಿಯಲ್ಲಿ ವಾಹನ ಖರೀದಿ ಸಾಲಕ್ಕೆ ಒಂದು ವರ್ಷಕ್ಕೆ ಶೇಕಡಾ 10ರ ಬಡ್ಡಿದರ ಅನ್ವಯಿಸಲಾಗುವುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. |