ದೇಶಿಯ ಸ್ಥಿರ ಹಾಗೂ ಮೊಬೈಲ್ ದೂರವಾಣಿ ಕರೆಗಳ ಮೇಲೆ ವಿಧಿಸಲಾಗುತ್ತಿರುವ ಸೇವೆ ಶುಲ್ಕವನ್ನು ಟೆಲಿಕಾಂ ಅಥಾರಿಟಿ ಆಫ್ ಇಂಡಿಯಾ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ವಿಶೇಷ ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಸರಾಸರಿಯಾಗಿ ಸ್ಥಳೀಯ ಕರೆಗಳು ಪ್ರತಿ ನಿಮಿಷಕ್ಕೆ 80 ರಿಂದ 90 ಪೈಸೆಯಾಗಲಿದೆ. ಎಸ್‌ಟಿಡಿ ದರಗಳು ಪ್ರತಿ ನಿಮಿಷಕ್ಕೆ 1.25 ರೂಪಾಯಿಗಳಿಗೆ ತಲುಪಲಿದೆ.ಪ್ರಸ್ತುತವಿರುವ ಪ್ರತಿ ನಿಮಿಷಕ್ಕೆ 30 ಪೈಸೆ ದರವನ್ನು ಕಡಿತಗೊಳಿಸಿ 20ಪೈಸೆಗೆ ಸೇವಾ ಶುಲ್ಕವನ್ನು ಕಡಿತಗೊಳಿಸಿದೆ. ಕಡಿಮೆ ಸೇವಾ ಶುಲ್ಕ ಹಾಗೂ ಕಡಿಮೆ ದರಗಳ ಮಧ್ಯೆ ಹೊಂದಾಣಿಕೆಯಿದ್ದು ಮೊಬೈಲ್ ಗ್ರಾಹಕರಿಗೆ ಕಡಿಮೆ ದರದಲ್ಲಿ ಸೇವಾ ಸೌಲಭ್ಯವನ್ನು ಒದಗಿಸಲು ಟ್ರಾಯ್ ಹಲವು ಶುಲ್ಕಗಳನ್ನು ಕಡಿತಗೊಳಿಸಿದೆ ಎಂದು ಟ್ರಾಯ್ ಮುಖ್ಯಸ್ಥ ಎನ್.ಮಿಶ್ರಾ ತಿಳಿಸಿದ್ದಾರೆ. |