ಇಸ್ಲಾಮಾಬಾದ್ ಬಹುಕೋಟಿ ಮೊತ್ತದ ಇರಾನ್-ಪಾಕಿಸ್ತಾನ್-ಇಂಡಿಯಾ ಉದ್ದೇಶಿತ ಅನಿಲ ಕೊಳವೆ ಯೋಜನೆಯಲ್ಲಿ ಭಾರತ ಹಿಂದೇಟು ಹಾಕಿದರೂ ಕೂಡಾ ಪಾಕ್ ಮುಂದುವರಿಯಲಿದೆ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ. ಟೆಹರಾನ್‌ನಲ್ಲಿ ಆಯೋಜಿಸಿದ ಎಕಾನಾಮಿಕಲ್ ಕೋಅಪರೇಷನ್ ಆಯೋಜಿಸಿದ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಟೆಹರಾನ್‌ಗೆ ತೆರಳುತ್ತಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಇರಾನ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜರ್ದಾರಿ, ಇರಾನ್ ಅಧ್ಯಕ್ಷ ಮೊಹಮೂದ್ ಅಹ್ಮದ್ ದಿನೇಜಾದ್ ಅವರನ್ನು ಕಳೆದ ವರ್ಷ ಭೇಟಿಯಾದಾಗ ಅನಿಲ ಕೊಳವೆ ಯೋಜನೆಗೆ ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಜರ್ದಾರಿ ತಿಳಿಸಿದ್ದಾರೆ. ಭಾರತ ಉದ್ದೇಶಿತ ಐಪಿಐ ಯೋಜನೆಯಲ್ಲಿ ಪಾಲ್ಗೊಳ್ಳದಿದ್ದಲ್ಲಿ ಕೂಡಾ ಯೋಜನೆಯಲ್ಲಿ ಪಾಕಿಸ್ತಾನ್ ಮತ್ತು ಇರಾನ್ ಮುಂದುವರಿಯಲಿವೆ ಎಂದು ಅಧ್ಯಕ್ಷ ಜರ್ದಾರಿ ಹೇಳಿದ್ದಾರೆ. |