ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೊಂಟೆಕ್ ನೇತೃತ್ವದಲ್ಲಿ ಜಿ-20 ತಂಡ ಲಂಡನ್‌ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಂಟೆಕ್ ನೇತೃತ್ವದಲ್ಲಿ ಜಿ-20 ತಂಡ ಲಂಡನ್‌ಗೆ
PTI
ಜಿ-20 ರಾಷ್ಟ್ರಗಳ ಸಭೆ ಮುಂದಿರುವಂತೆ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ನೇತೃತ್ವದಲ್ಲಿ ತಂಡವೊಂದು ಮಾರ್ಚ್ 11 ರಂದು ಲಂಡನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ನಗದು ಚಲಾವಣೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಆರ್ಥಿಕ ನೀತಿಗಳು ಕುರಿತಂತೆ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ತಂಡದಲ್ಲಿ ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ಜಿ-20 ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿ-20 ರಾಷ್ಟ್ರಗಳ ಸಭೆಯಲ್ಲಿ ದೋಹಾ ಒಪ್ಪಂದ, ಜಾಗತಿಕ ನಗದು ಹಣ ಚಲಾವಣೆ ಸಮಸ್ಯೆ, ಜಗತ್ತಿನ ಎಲ್ಲ ಸೆಂಟ್ರಲ್ ಬ್ಯಾಂಕ್‌ಗಳ ಮಧ್ಯೆ ಸಹಕಾರ ಮತ್ತು ರಫ್ತು ವಹಿವಾಟುದಾರರ ಸಾಲದ ಸಮಸ್ಯೆ ಕುರಿತಂತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಏಪ್ರಿಲ್ 2 ರಂದು ನಡೆಯಲಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಬ್ರಿಟನ್ ಪ್ರಧಾನಿ ಅಹ್ವಾನದ ಮೇರೆಗೆ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೊಂಟೆಕ್, ನೇತೃತ್ವ, ಜಿ20, ಲಂಡನ್
ಮತ್ತಷ್ಟು
ಭಾರತವನ್ನು ಹೊರತುಪಡಿಸಿ ಐಪಿಐ ಯೋಜನೆಗೆ ಸಿದ್ದ
ಶೀಘ್ರದಲ್ಲಿ ಸ್ಥಳೀಯ, ಎಸ್‌ಟಿಡಿ ದರಗಳು ಮತ್ತಷ್ಟು ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಶೇಷ ಬಡ್ಡಿದರ
ಸತ್ಯಂ ಆರೋಪಿಗಳು ಸಿಬಿಐ ವಶಕ್ಕೆ
ಸತ್ಯಂನಿಂದ ಖರೀದಿ ಬಿಡ್ ಅಹ್ವಾನ
ಮಾರ್ಚ್ ಅಂತ್ಯಕ್ಕೆಹಣದುಬ್ಬರ ದರ ಶೂನ್ಯ