ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಭಾರಿ ಕುಸಿತದಿಂದ ಕಳವಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಭಾರಿ ಕುಸಿತದಿಂದ ಕಳವಳ
PTI
ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಶೇ.12.91 ರಷ್ಟು ಹಣದುಬ್ಬರ ಏರಿಕೆಯಾಗಿ ಆತಂಕ ಸೃಷ್ಟಿಸಿತ್ತು. ಆದರೆ ಆರಂಭದಲ್ಲಿ ಹಣದುಬ್ಬರ ಇಳಿಕೆಯಾಗುತ್ತಿರುವಂತೆ ಸಂತಸ ಮೂಡಿಸಿತ್ತು. ಹಣದುಬ್ಬರ ಶೂನ್ಯಕ್ಕೆ ಇಳಿಕೆಯಾಗುತ್ತಿರುವುದು ಮತ್ತಷ್ಟು ಕಳವಳ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.

ಹಣದುಬ್ಬರ ವೇಗವಾಗಿ ಇಳಿಕೆಯಾಗುತ್ತಿರುವುದು ಬಿಗಿಯಿಲ್ಲದ ಆರ್ಥಿಕತೆಯನ್ನು ತೋರಿಸುವುದರಿಂದ ಕಳವಳ ಪಡುವ ವಿಷಯವಾಗಿದೆ ಎಂದು ಕೊಟ್ಯಾಕ್ ಮಹೇಂದ್ರ್ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರಾದ ಇಂದ್ರಾನಿಲ್ ಪಾನ್ ಅಭಿಪ್ರಾಯಪಟ್ಟಿದ್ದು, ಹಣದುಬ್ಬರ ಶೂನ್ಯಕ್ಕೆ ಇಳಿಕೆಯಾಗಿ ಕೆಲ ಕಾಲ ಋಣಾತ್ಮಕ ವಲಯದಲ್ಲಿರಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಏರಿಕೆಯಾಗಿದ್ದ ತೈಲ ದರವನ್ನು ಕೇಂದ್ರ ಸರಕಾರ ಮತ್ತಷ್ಟು ಕಡಿತಗೊಳಿಸಿದ್ದರಿಂದ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಹಣದುಬ್ಬರ ಮತ್ತಷ್ಟು ಇಳಿಕೆಯಾಗಿ ಋಣಾತ್ಮಕವಲಯದತ್ತ ಸಾಗಲಿದೆ ಎಂದು ಫಿಚ್ ರೇಟಿಂಗ್ಸ್‌ನ ಆರ್ಥಿಕ ತಜ್ಞರಾದ ಜೇಮ್ಸ್ ಮ್ಯಾಕ್‌ ಕೊರ್ಮ್ಯಾಕ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಕುಸಿತ, ಕಳವಳ
ಮತ್ತಷ್ಟು
ಮೊಂಟೆಕ್ ನೇತೃತ್ವದಲ್ಲಿ ಜಿ-20 ತಂಡ ಲಂಡನ್‌ಗೆ
ಭಾರತವನ್ನು ಹೊರತುಪಡಿಸಿ ಐಪಿಐ ಯೋಜನೆಗೆ ಸಿದ್ದ
ಶೀಘ್ರದಲ್ಲಿ ಸ್ಥಳೀಯ, ಎಸ್‌ಟಿಡಿ ದರಗಳು ಮತ್ತಷ್ಟು ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಶೇಷ ಬಡ್ಡಿದರ
ಸತ್ಯಂ ಆರೋಪಿಗಳು ಸಿಬಿಐ ವಶಕ್ಕೆ
ಸತ್ಯಂನಿಂದ ಖರೀದಿ ಬಿಡ್ ಅಹ್ವಾನ