ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೋರ್ಡ್ ಇಂಡಿಯಾ ಕಾರುಗಳ ಮಾರಾಟದಲ್ಲಿ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೋರ್ಡ್ ಇಂಡಿಯಾ ಕಾರುಗಳ ಮಾರಾಟದಲ್ಲಿ ಹೆಚ್ಚಳ
PTI
ವಾಹನೋದ್ಯಮದ ಪ್ರಮುಖ ಕಂಪೆನಿಯಾದ ಫೋರ್ಡ್ ಇಂಡಿಯಾ, ಜನೆವರಿ ತಿಂಗಳಿಗೆ ಹೋಲಿಸಿದಲ್ಲಿ ಫೆಬ್ರವರಿ ತಿಂಗಳಲ್ಲಿ ಕಾರುಗಳ ಮಾರಾಟದಲ್ಲಿ ಶೇ.35 ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದ ಜನೆವರಿ ತಿಂಗಳಲ್ಲಿ 1956 ಕಾರುಗಳ ಮಾರಾಟವಾಗಿದ್ದು,ಫೆಬ್ರವರಿ ತಿಂಗಳಲ್ಲಿ 2,636 ಕಾರುಗಳ ಮಾರಾಟವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನಗಳ ವಾರ್ಷಿಕ ಮಾರಾಟದಲ್ಲಿ ಶೇ.8 ರಷ್ಟು ಏರಿಕೆಯಾಗಿದೆ ಎಂದು ಫೋರ್ಡ್ ಮೋಟಾರ್ಸ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ನೂತನ ಫೋರ್ಡ್ ಐಕಾನ್ ಮಾಡೆಲ್ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ದೇಶದಾದ್ಯಂತ ಫೋರ್ಡ್ ಐಕಾನ್ ಮಾರಾಟದಲ್ಲಿ ದಾಖಲೆ ಸ್ಥಾಪಿಸಿದೆ ಎಂದು ತಿಳಿಸಿದೆ.

2008ರಲ್ಲಿ ಬಿಡುಗಡೆಯಾದ ನೂತನ ಎಂಡೊವರ್ ಮಾಡೆಲ್, ಫೋರ್ಡ್ ಐಕಾನ್ ಕಾರುಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿವೆ ಎಂದು ಫೋರ್ಡ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ತಿಮೋತಿ ಟುಕ್ಕರ್ ಹೇಳಿದ್ದಾರೆ.

ಗ್ರಾಹಕರ ಹಣಕ್ಕೆ ಉತ್ತಮ ಮಾಡೆಲ್‌ಗಳ ಕಾರುಗಳನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ ಎಂದು ತಿಮೋತಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಭಾರಿ ಕುಸಿತದಿಂದ ಕಳವಳ
ಮೊಂಟೆಕ್ ನೇತೃತ್ವದಲ್ಲಿ ಜಿ-20 ತಂಡ ಲಂಡನ್‌ಗೆ
ಭಾರತವನ್ನು ಹೊರತುಪಡಿಸಿ ಐಪಿಐ ಯೋಜನೆಗೆ ಸಿದ್ದ
ಶೀಘ್ರದಲ್ಲಿ ಸ್ಥಳೀಯ, ಎಸ್‌ಟಿಡಿ ದರಗಳು ಮತ್ತಷ್ಟು ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಶೇಷ ಬಡ್ಡಿದರ
ಸತ್ಯಂ ಆರೋಪಿಗಳು ಸಿಬಿಐ ವಶಕ್ಕೆ