ಜರ್ಮನಿಯ ಅತ್ಯಾಧುನಿಕ ಕಾರುಗಳ ತಯಾರಿಕೆ ಸಂಸ್ಥೆ ಆಡಿ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಮುಂಬರುವ ಎರಡು ವರ್ಷಗಳಲ್ಲಿ ಏಳು ಮಾಡೆಲ್‌ಗಳ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿ ಆರಂಭವಾಗಿ 100 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಪ್ರಸಕ್ತ ವರ್ಷ ವಿಶೇಷವಾಗಿದ್ದು, ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲಿ ಝಿರೋ -ಎಮಿಶನ್‌ನ ಕ್ಯೂ 7, ಸೆಡಾನ್ ಎ4 ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸಲಾಗುತ್ತಿದೆ ಎಂದು ಆಡಿ ಕಂಪೆನಿಯ ಜೋಸೆಫ್ ಶೊಯಿನ್ ಹೇಳಿದ್ದಾರೆ.
ಮುಂಬರುವ 2010ರ ವೇಳೆಗೆ ವಿಶ್ವದಾದ್ಯಂತ ಕನಿಷ್ಟ ಏಳು ಮಾಡೆಲ್‌ಗಳ ಕಾರುಗಳನ್ನು ಬಿಡುಗಡೆ ಮಾಡಲು ಕಂಪೆನಿ ಯೋಜನೆಯನ್ನು ರೂಪಿಸಿದೆ ಎಂದು ಕಂಪೆನಿಯ ಅಧಿಕಾರಿಗಳಉ ತಿಳಿಸಿದ್ದಾರೆ.
ಹೈಬ್ರಿಡ್ಸ್ ಮತ್ತು ಎಲೆಕ್ಟ್ರಿಕ್ ಕಾರುಗಳ ತಯಾರಿಕೆಗೆ ಕೂಡಾ ಸಿದ್ದತೆ ನಡೆಸಿದ್ದು, ಸುವಿ ಕ್ಯೂ 5 ಮಾಡೆಲ್ ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಶೋಯಿನ್ ಹೇಳಿದ್ದಾರೆ.
ಎ1,ಎ4 ಆಲ್‌ರೋಡ್, ಎ5 ಎಸ್‌ಬಿ, ಎ7, ಆರ್ 8 ಸ್ಪೈಡರ್ ಮತ್ತು ಸುವ್ ಕ್ಯೂ5 ಮಾಡೆಲ್‌ಗಳ ಕಾರುಗಳನ್ನು ಮುಂಬರುವ 2010ರ ವೇಳೆಗೆ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ. |