ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಾಗತಿಕ ಆರ್ಥಿಕ ಕುಸಿತ ಶೂನ್ಯಕ್ಕಿಂತ ಇಳಿಕೆ:ಐಎಂಎಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾಗತಿಕ ಆರ್ಥಿಕ ಕುಸಿತ ಶೂನ್ಯಕ್ಕಿಂತ ಇಳಿಕೆ:ಐಎಂಎಫ್
ದರ್-ಏ-ಸಲಾಂ : ಜಾಗತಿಕ ಆರ್ಥಿಕತೆ ಶೂನ್ಯಕ್ಕಿಂತ ಕೆಳಗಿಳಿಯಲಿದ್ದು ಬೃಹತ್ ಆರ್ಥಿಕ ಕುಸಿತವನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಜಾಗತಿಕ ಆರ್ಥಿಕ ಕುಸಿತ ಶೂನ್ಯ ಮಟ್ಟಕ್ಕಿಂತ ಕೆಳಗಿಳಿಯುವುದರಿಂದ ನಮ್ಮ ಜೀವನದಲ್ಲಿ ಎಂದು ಕಂಡರಿಯದ ಕುಸಿತವಾಗಿದೆ ಎಂದು ಐಎಂಎಫ್ ನಿರ್ದೇಶಕ ಡೊಮಿನಿಕ್ ಸ್ಟ್ರಾಸ್, ತಾಂಜೇನಿಯಾದ ರಾಜಧಾನಿಯಲ್ಲಿ ಆಫ್ರಿಕಾದ ರಾಜಕೀಯ ನಾಯಕರು ಮತ್ತು ಹಣಕಾಸು ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ಗ್ರಾಹಕ ಮತ್ತು ವಹಿವಾಟಿನಲ್ಲಿ ವಿಶ್ವಾಸ ಕುಸಿಯುತ್ತಿರುವುದರಿಂದ ಜಗತ್ತಿನಾದ್ಯಂತ ದೇಶಿಯ ಉತ್ಪನ್ನಗಳ ಬೇಡಿಕೆ ಕುಸಿಯುತ್ತಿದೆ. ಜಾಗತಿಕ ವಹಿವಾಟು ದಾಖಲೆಯ ಪ್ರಮಾಣದಲ್ಲಿ ಕುಸಿಯುತ್ತಿದ್ದು ಸರಕುಗಳ ಧಾರಣೆ ದರ ಇಳಿಕೆಯಾಗುತ್ತಿದೆ ಎಂದು ನಿರ್ದೇಶಕ ಸ್ಟ್ರಾಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಆಫ್ರಿಕಾ ದೇಶಕ್ಕೆ ಆರ್ಥಿಕ ಕುಸಿತದ ಬಿಸಿ ತಟ್ಟದಿದ್ದರೂ ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಬೀರಲಿದೆ. ದೇಶದ ಬಡಜನತೆಯನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಆಫ್ರಿಕಾ ಅಭಿವೃದ್ಧಿ ಪಥದಲ್ಲಿ ಜಗತ್ತಿನಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕಾಗಿದೆ ಎಂದು ಐಎಂಎಫ್ ನಿರ್ದೇಶಕ ಸ್ಟ್ರಾಸ್ ಖಾನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಗತಿಕ, ಆರ್ಥಿಕ, ಕುಸಿತ, ಐಎಂಎಫ್
ಮತ್ತಷ್ಟು
2010ರೊಳಗೆ ಏಳು ಮಾಡೆಲ್ ಕಾರುಗಳ ಬಿಡುಗಡೆ
ಫೋರ್ಡ್ ಇಂಡಿಯಾ ಕಾರುಗಳ ಮಾರಾಟದಲ್ಲಿ ಹೆಚ್ಚಳ
ಹಣದುಬ್ಬರ ಭಾರಿ ಕುಸಿತದಿಂದ ಕಳವಳ
ಮೊಂಟೆಕ್ ನೇತೃತ್ವದಲ್ಲಿ ಜಿ-20 ತಂಡ ಲಂಡನ್‌ಗೆ
ಭಾರತವನ್ನು ಹೊರತುಪಡಿಸಿ ಐಪಿಐ ಯೋಜನೆಗೆ ಸಿದ್ದ
ಶೀಘ್ರದಲ್ಲಿ ಸ್ಥಳೀಯ, ಎಸ್‌ಟಿಡಿ ದರಗಳು ಮತ್ತಷ್ಟು ಇಳಿಕೆ