ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಸಾಫ್ಟ್‌ವೇರ್ ಬೇಡಿಕೆಯಲ್ಲಿ ಕುಸಿತವಾದರೂ ದೇಶದ ಎರಡನೇ ಪ್ರಮುಖ ಸಾಫ್ಟವೇರ್ ಕಂಪೆನಿ ಇನ್ಫೋಸಿಸ್, 20 ಸಾವಿರ ಇಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದು, ಕಳೆದ ವರ್ಷ ನಿಗದಿಪಡಿಸಿದ ವೇತನಕ್ಕಿಂತ ಶೇ.8.3 ರಷ್ಟು ಹೆಚ್ಚಳ ವೇತನ ನೀಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ದೇಶದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ ,ವಿಪ್ರೋ ಮತ್ತು ಎಚ್‌ಸಿಎಲ್ ಟೆಕ್ನಾಲಾಜೀಸ್ ಕಂಪೆನಿಗಳು ನೂತನವಾಗಿ ಆಯ್ಕೆ ಮಾಡಿದ ಉದ್ಯೋಗಿಗಳನ್ನು ಕಂಪೆನಿಗೆ ಸೇರಿಸಿಕೊಳ್ಳುವ ದಿನಾಂಕಗಳನ್ನು ಮುಂದೂಡುತ್ತಿವೆ. ಆದರೆ ಇನ್ಫೋಸಿಸ್ ಕಳೆದ ವರ್ಷಕ್ಕಿಂತ ಶೇ.8.3 ರಷ್ಟು ಹೆಚ್ಚಿನ ವೇತನ ನೀಡುವುದಾಗಿ ಹೇಳಿಕೆ ನೀಡಿದೆ. ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಸೇರ್ಪಡೆಯಾಗುವ ಉದ್ಯೋಗಿಗಳಿಗೆ ವಾರ್ಷಿಕವಾಗಿ ನೀಡುವ ವೇತನವನ್ನು 3 ಲಕ್ಷದಿಂದ 3.25 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದು ಇನ್ಫೋಸಿಸ್‌ನ ಗ್ಲೋಬಲ್ ಹ್ಯೂಮನ್ ರಿಸೊರ್ಸ್ ಹಿರಿಯ ಉಪಾಧ್ಯಕ್ಷ ನಂದಿತಾ ಗುರ್ಜಾರ್ ತಿಳಿಸಿದ್ದಾರೆ. ಪ್ರತಿಭಾವಂತ ಇಂಜಿನಿಯರಿಂಗ ಪದವೀಧರರನ್ನು ನೇಮಕ ಮಾಡಿಕೊಂಡು ಕಂಪೆನಿಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಮುಖ ಕಂಪೆನಿಗಳು ನೇಮಕಾತಿ ಮಾಡಿಕೊಳ್ಳುತ್ತಿವೆ ಎಂದು ಗಲೂಪ್ ಕನ್ಸಲ್‌ಟಿಂಗ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಶ್ರೀವಾತ್ಸವ್ ತಿಳಿಸಿದ್ದಾರೆ. |