ಜರ್ಮನಿಯ ವೊಕ್ಸವಾಗನ್ ಗುಂಪಿನ ಸ್ಕೊಡಾ ಇಂಡಿಯಾ ಸಣ್ಣ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಯೋಜನೆಯನ್ನು ರೂಪಿಸಿದೆ. ಫಾಬಿಯಾ ಮಾಡೆಲ್ ಕಾರಿಗಿಂತ ಕಡಿಮೆ ದರದಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಮುಂಬರುವ 3-5 ವರ್ಷಗಳಲ್ಲಿ ಸಣ್ಣಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಕಾರಿನ ದರ ಐದು ಲಕ್ಷಕ್ಕಿಂತ ಕಡಿಮೆಯಾಗಲಿದೆ ಎಂದು ಸ್ಕೊಡಾ ಅಟೋ ಇಂಡಿಯಾದ ಅಡಳಿತ ಮಂಡಳಿ ಸದಸ್ಯ ಥಾಮಸ್ ಕುಹೆಲ್ ಹೇಳಿದ್ದಾರೆ. ಸ್ಕೊಡಾ ಕಂಪೆನಿಯ ಲವೂರಾ ಅಕ್ಟಾವಿಯಾ ಮತ್ತು ಸೂಪರ್ಬ್ ಮಾಡೆಲ್ ಕಾರುಗಳು ಇಂಡಿಯಾದಲ್ಲಿ ಲಭ್ಯವಿವೆ. ದೇಶದ ಸಿ+ ಕಾರುಗಳ ಕ್ಷೇತ್ರದಲ್ಲಿ ಸ್ಕೊಡಾ ಶೇ.25 ರಷ್ಟು ಮಾರುಕಟ್ಟೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಸ್ಕೊಡಾ ಕಂಪೆನಿ ಸೆಡಾನ್ ಸೂಪರ್ಬ್ ಎನ್ನುವ ನೂತನ ಮಾಡೆಲ್ ಕಾರನ್ನು ಬಿಡುಗಡೆ ಮಾಡಲಿದ್ದು, ಏಳು ಗೇರ್‌ಗಳನ್ನು ಹೊಂದಿದ ಕಾರಿಗೆ ಶೋರೂಂ ಹೊರತುಪಡಿಸಿ 18.88 ಲಕ್ಷ ರೂ. ದರ ನಿಗದಿಪಡಿಸಲಾಗಿದೆ. ಕಳೆದ 2001ರಿಂದ ಇಲ್ಲಿಯವರೆಗೆ ಸುಮಾರು 65 ಸಾವಿರ ಕಾರುಗಳನ್ನು ಮಾರಾಟ ಮಾಡಿದ್ದು,ದೇಶದಾದ್ಯಂತ 60 ಡೀಲರ್‌ಶಿಪ್ ಕೇಂದ್ರಗಳನ್ನು ಹೊಂದಿವೆ ಎಂದು ಸ್ಕೊಡಾ ನಿರ್ದೇಶಕ ಥಾಮಸ್ ಹೇಳಿದ್ದಾರೆ. |