ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೆಬ್ರವರಿಯಲ್ಲಿ 9.1ಮಿನ್ ಜಿಎಸ್‌ಎಂ ಗ್ರಾಹಕರ ಸೇರ್ಪಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಬ್ರವರಿಯಲ್ಲಿ 9.1ಮಿನ್ ಜಿಎಸ್‌ಎಂ ಗ್ರಾಹಕರ ಸೇರ್ಪಡೆ
PTI
ಜಾಗತಿಕ ಆರ್ಥಿಕ ಕುಸಿತದ ಪ್ರಭಾವ ಮೊಬೈಲ್ ಕಂಪೆನಿಗಳಿಗೆ ತಲುಪಲು ವಿಫಲವಾಗಿದೆ.ದೇಶಧ ಜಿಎಸ್‌ಎಂ ಆಪರೇಟರ್‌‌ಗಳು ಫೆಬ್ರವರಿ ತಿಂಗಳಲ್ಲಿ 9.1 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿರುವುದರಿಂದ ವೈರ್‌ಲೆಸ್ ಮಾರುಕಟ್ಟೆಯಲ್ಲಿ ಒಟ್ಟು 277.1 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ಫೆಬ್ರವರಿ ತಿಂಗಳಲ್ಲಿ 2.73 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿ ಒಟ್ಟು ಗ್ರಾಹಕರ ಸಂಖ್ಯೆಯನ್ನು 91 ಮಿಲಿಯನ್‌ಗಳಿಗೆ ತಲುಪಿ ಗುರಿ ಸಾಧಿಸಿದೆ. ವೊಡಾಫೋನ್ ಸಂಸ್ಥೆ ಫೆಬ್ರವರಿ ತಿಂಗಳಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿ ಒಟ್ಟು ಗ್ರಾಹಕರ ಸಂಖ್ಯೆಯನ್ನು 65 ಮಿಲಿಯನ್‌ಗಳಿಗೆ ಏರಿಕೆ ಮಾಡಿದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ ಫೆಬ್ರವರಿ ತಿಂಗಳಲ್ಲಿ 1.5 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು ಒಟ್ಟು 44 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ.ಐಡಿಯಾ ಸೆಲ್ಯೂಲರ್ ಟೆಲಿಕಾಂ ಸಂಸ್ಥೆ ಫೆಬ್ರವರಿ ತಿಂಗಳಲ್ಲಿ 1.5 ಮಿಲಿಯನ್ ಗ್ರಾಹಕರ ಸೇರ್ಪಡೆಗೊಳಿಸಿದ್ದು, ಒಟ್ಟು ಗ್ರಾಹಕರ ಸಂಖ್ಯೆಯನ್ನು 41 ಮಿಲಿಯನ್‌ಗಳಿಗೆ ತಲುಪಿದಂತಾಗಿದೆ.

ಜಿಎಸ್‌ಎಂ ಸೇವೆಯನ್ನು ನೀಡುತ್ತಿರುವ ರಿಲಯನ್ಸ್ ಕಮ್ಯೂನಿಕೇಶನ್ಸ್ ಲಿಮಿಟೆಡ್ ಸಿಡಿಎಂಎ ನೆಟ್‌ವರ್ಕ್ ಜಾಲವನ್ನು ಹೊಂದಿದ್ದು, ಜಿಎಸ್‌ಎಂ ಗ್ರಾಹಕರ ವಿವರಗಳನ್ನು ಪ್ರತ್ಯೇಕವಾಗಿ ಒದಗಿಸುತ್ತದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್ಕೊಡಾದಿಂದ ಮಿನಿ ಕಾರು ಮಾರುಕಟ್ಟೆಗೆ
ಯ‌ೂರಿಯಾ ಘಟಕ ಸ್ಥಾಪನೆ
ಹಣಕಾಸು ವರದಿ: ಟಾಟಾ ವಿಶ್ವಾಸಾರ್ಹ
ಇನ್ಫೋಸಿಸ್‌ಗೆ 20 ಸಾವಿರ ಪದವೀಧರರ ನೇಮಕ
ಜಾಗತಿಕ ಆರ್ಥಿಕ ಕುಸಿತ ಶೂನ್ಯಕ್ಕಿಂತ ಇಳಿಕೆ:ಐಎಂಎಫ್
2010ರೊಳಗೆ ಏಳು ಮಾಡೆಲ್ ಕಾರುಗಳ ಬಿಡುಗಡೆ