ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟಿನಿಂದ ಶೇ.45 ರಷ್ಟು ಸಂಪತ್ತು ನಾಶ:ಸ್ಟೆಫನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟಿನಿಂದ ಶೇ.45 ರಷ್ಟು ಸಂಪತ್ತು ನಾಶ:ಸ್ಟೆಫನ್
PTI
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜಗತ್ತಿನ ಶೇ.45 ರಷ್ಟು ಸಂಪತ್ತು ನಾಶವಾಗಿದೆ ಎಂದು ಅಮೆರಿಕದ ಖಾಸಗಿ ಶೇರು ಕಂಪೆನಿಯಾದ ಬ್ಲ್ಯಾಕ್‌ಸ್ಟೋನ್‌ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಫನ್ ಶೆವಾರ್ಝ್‌ಮ್ಯಾನ್‌ ಹೇಳಿದ್ದಾರೆ.

ಕಳೆದ ಒಂದುವರೆ ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಜಗತ್ತಿನ 40 ರಿಂದ 45 ರಷ್ಟು ಸಂಪತ್ತು ನಾಶವಾಗಿದೆ. ಆರ್ಥಿಕ ಕುಸಿತ ನಮ್ಮ ಜೀವನದ ಅವಧಿಯಲ್ಲಿ ನಡೆದ ದೊಡ್ಡ ದುರಂತ ಎಂದು ಸ್ಟೆಫನ್ ಜಪಾನ್ ಸೂಸೈಟಿ ಆಯೋಜಿಸಿದ ಸಭೆಯಲ್ಲಿ ತಿಳಿಸಿದ್ದಾರೆ.

ಆದರೆ ಅಮೆರಿಕ ಸರಕಾರ ಆರ್ಥಿಕ ಕುಸಿತವನ್ನು ತಡೆಯಲು ಹಣಕಾಸು ಸಂಸ್ಥೆಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ನುಡಿದರು.

ಅಮೆರಿಕದ ಖಜಾನೆ ಇಲಾಖೆಯ ಕಾರ್ಯದರ್ಶಿ ತಿಮೋತಿ ಗೈಟ್ನರ್‌ ಮಾತನಾಡಿ, ನೂತನ ಯೋಜನೆಯನ್ವಯ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಹೂಡಿಕೆಯಿಂದಾಗಿ ಬ್ಯಾಂಕ್‌ಗಳಲ್ಲಿ 1 ಟ್ರಿಲಿಯನ್ ಡಾಲರ್ ಸಂಗ್ರಹಿಸುವುದರಿಂದ ಮಾರುಕಟ್ಟೆಯಲ್ಲಿ ಸಾಲ ನೀಡಿಕೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರಕೌಶಲ ರಫ್ತು ವಹಿವಾಟು ಶೇ.50 ರಷ್ಟು ಇಳಿಕೆ
ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 24 ಭಾರತೀಯರು
ಮಡೋಫ್‌ಗೆ ಜೀವಾವಧಿ ಶಿಕ್ಷೆ ಸಾಧ್ಯತೆ?
ಫೆಬ್ರವರಿಯಲ್ಲಿ 9.1ಮಿನ್ ಜಿಎಸ್‌ಎಂ ಗ್ರಾಹಕರ ಸೇರ್ಪಡೆ
ಸ್ಕೊಡಾದಿಂದ ಮಿನಿ ಕಾರು ಮಾರುಕಟ್ಟೆಗೆ
ಯ‌ೂರಿಯಾ ಘಟಕ ಸ್ಥಾಪನೆ