ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚೀನಾ ರಫ್ತು ವಹಿವಾಟು ಶೇ25.7 ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾ ರಫ್ತು ವಹಿವಾಟು ಶೇ25.7 ರಷ್ಟು ಕುಸಿತ
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಫೆಬ್ರವರಿ ತಿಂಗಳಿನಲ್ಲಿ ಚೀನಾದ ರಫ್ತುವಹಿವಾಟಿನಲ್ಲಿ ಶೇ.25.7 ರಷ್ಟು ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಸಿಟಿಗ್ರೂಪ್ ಬ್ಯಾಂಕ್ ಲಾಭದತ್ತ ಮರಳುತ್ತಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಅಮೆರಿಕ ಶೇರುಪೇಟೆ ಚೇತರಿಸಿಕೊಂಡಿದ್ದರಿಂದ ಏಷ್ಯಾ ಶೇರುಪೇಟೆಗಳು ಕೂಡಾ ಚೇತರಿಸಿಕೊಳ್ಳುತ್ತಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಪಾಶ್ಚಾತ್ಯ ರಾಷ್ಟ್ರಗಳ ಗ್ರಾಹಕರನ್ನು ಅವಲಂಬಿಸಿದ ಚೀನಾ ರಫ್ತು ವಹಿವಾಟು ಜನೆವರಿ ತಿಂಗಳಿನಲ್ಲಿ ಶೇ.17.5 ರಷ್ಟು ಕುಸಿತ ಕಂಡಿದ್ದು, ಫೆಬ್ರವರಿಯಲ್ಲಿ ಮತ್ತಷ್ಟು ಹೀನಾಯವಾಗಿ ಶೇ.25.7 ರಷ್ಟು ಕುಸಿತ ಕಂಡಿದೆ.

ಜಾಗತಿಕ ಆರ್ಥಿಕತೆಯಲ್ಲಿ ಮೂರನೇ ಸ್ಥಾನಪಡೆದಿರುವ ಚೀನಾ , ಶೀಘ್ರದಲ್ಲಿ ಮತ್ತಷ್ಟು ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡುವ ಅಗತ್ಯವಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ .

ಜಾಗತಿಕ ಬೇಡಿಕೆ ಕುಸಿತವಾಗಿದ್ದರಿಂದ ರಫ್ತು ವಹಿವಾಟು ಇಳಿಕೆಯಾಗಿದ್ದು, ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಇತರ ರಾಷ್ಟ್ರಗಳಲ್ಲಿ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ರಫ್ತು ವಹಿವಾಟು, ಅಮೆರಿಕ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟಿನಿಂದ ಶೇ.45 ರಷ್ಟು ಸಂಪತ್ತು ನಾಶ:ಸ್ಟೆಫನ್
ಕರಕೌಶಲ ರಫ್ತು ವಹಿವಾಟು ಶೇ.50 ರಷ್ಟು ಇಳಿಕೆ
ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 24 ಭಾರತೀಯರು
ಮಡೋಫ್‌ಗೆ ಜೀವಾವಧಿ ಶಿಕ್ಷೆ ಸಾಧ್ಯತೆ?
ಫೆಬ್ರವರಿಯಲ್ಲಿ 9.1ಮಿನ್ ಜಿಎಸ್‌ಎಂ ಗ್ರಾಹಕರ ಸೇರ್ಪಡೆ
ಸ್ಕೊಡಾದಿಂದ ಮಿನಿ ಕಾರು ಮಾರುಕಟ್ಟೆಗೆ