ಜಾಗತಿಕ ಆರ್ಥಿಕ ಕುಸಿತದ ಬಿಸಿಯನ್ನು ಅನೇಕ ಬಿಲಿಯನೇರ್‌ಗಳು ಎದುರಿಸುತ್ತಿದ್ದರೂ ಕಾರ್ಪೋರೇಟ್ ಕ್ಷೇತ್ರದ ಮೈಕ್ರೋಸಾಫ್ಟ್ ದಿಗ್ಗಜ ಸಂಸ್ಥಾಪಕ ಬಿಲ್‌ಗೇಟ್ಸ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನಪಡೆದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.
2008ರಲ್ಲಿ ಜಗತ್ತಿನ 1,125 ಬಿಲಿಯನೇರ್‌ಗಳಲ್ಲಿ 793 ಬಿಲಿಯನೇರ್‌ಗಳು ಅಂದಾಜು 2.4 ಟ್ರಿಲಿಯನ್ ಟಾಲರ್‌ಗಳಿಂದ 4.4 ಟ್ರಿಲಿಯನ್ ಡಾಲರ್‌ಗಳ ಸಂಪತ್ತನ್ನು ಕಳೆದುಕೊಂಡಿದ್ದಾರೆ ಎಂದು ಫೋರ್ಬ್ಸ್ ಮಹಿಳಾ ವಕ್ತಾರೆ ಮೊನಿ ಬೆಗ್ಲೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬಹುನಿರೀಕ್ಷಿತ ಶ್ರೀಮಂತರ ಪಟ್ಟಿಯಲ್ಲಿ ಗೇಟ್ಸ್ 40 ಬಿಲಿಯನ್ ಡಾಲರ್‌ಗಳ ನಿವ್ವಳ ಸಂಪತ್ತಿನೊಂದಿಗೆ ಮೊದಲನೇ ಸ್ಥಾನಪಡೆದಿದ್ದು, ಕಳೆದ 12 ತಿಂಗಳ ಅವಧಿಯಲ್ಲಿ 18 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ.
ಅಮೆರಿಕ ಶೇರುಪೇಟೆ ಹೂಡಿಕೆದಾರ ವಾರೆನ್ ಬಫೆಟ್, ಕಳೆದ ವರ್ಷದಲ್ಲಿ 25 ಬಿಲಿಯನ್ ಡಾಲರ್‌ಗಳ ನಷ್ಟ ಅನುಭವಿಸಿದರೂ 37 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮೆಕ್ಸಿಕೊ ದೇಶದ ಟೆಲಿಕಾಂ ಉದ್ಯಮಿ ಕಿಂಗ್ ಕಾರ್ಲೊಸ್ ಸ್ಲಿಮ್ 20 ಬಿಲಿಯನ್ ಡಾಲರ್‌ಗಳ ನಷ್ಟದ ನಂತರವೂ 35 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. |