ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಕೇಶ್, ಮಿತ್ತಲ್ ಶ್ರೀಮಂತ ಭಾರತೀಯ ಉದ್ಯಮಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಕೇಶ್, ಮಿತ್ತಲ್ ಶ್ರೀಮಂತ ಭಾರತೀಯ ಉದ್ಯಮಿಗಳು
PTI
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅನಿವಾಸಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಸೇರಿದಂತೆ 24 ಭಾರತೀಯ ಉದ್ಯಮಿಗಳು ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಕಳೆದ ವರ್ಷ ಶೇರುಪೇಟೆ ಶೇ.44 ರಷ್ಟು ಹಾಗೂ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಶೇ.18 ರಷ್ಟು ಕುಸಿತ ಕಂಡಿದ್ದರಿಂದ 29 ಬಿಲಿಯನೇರ್‌ಗಳು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ವಿಶ್ವಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 19.5 ಬಿಲಿಯನ್ ಡಾಲರ್‌ಗಳ ಸಂಪತ್ತಿನೊಂದಿಗೆ 7ನೇ ಸ್ಥಾನವನ್ನು ಪಡೆದಿದ್ದಾರೆ. ಮುಕೇಶ್‌ ಅಂಬಾನಿಗೆ ತೀರಾ ಹತ್ತಿರದಲ್ಲಿರುವ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ 19.3 ಬಿಲಯನ್ ಡಾಲರ್‌ಗಳ ಸಂಪತ್ತಿನೊಂದಿಗೆ 8ನೇ ಸ್ಥಾನವನ್ನು ಪಡೆದಿದ್ದಾರೆ.
PTI


ಉಭಯ ಉದ್ಯಮಿಗಳು ಜಾಗತಿಕ ಆರ್ಥಿಕ ಕುಸಿತದಿಂದಾಗಿ ಭಾರಿ ನಷ್ಟ ಅನುಭವಿಸಿದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಫೋರ್ಬ್ಸ್ ಪ್ರಕಟಿಸಿದೆ.

ಚೀನಾ ದೇಶವನ್ನು ಹಿಂದಕ್ಕೆ ತಳ್ಳಿ, ಭಾರತ ಏಷ್ಯಾದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದ ರಾಷ್ಟ್ರ ಎಂದು ಕರೆಯಿಸಿಕೊಳ್ಳುವ ದಿನಗಳು ದೂರವಿಲ್ಲ. ಈಗಾಗಲೇ 28 ಬಿಲಿಯನೇರ್‌‌ಗಳಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಮುಕೇಶ್ ಅಂಬಾನಿ ಸಹೋದರ ಹಾಗೂ ಉದ್ಯಮಿ ಅನಿಲ ಅಂಬಾನಿ 10.1 ಬಿಲಿಯನ್ ಡಾಲರ್‌ಗಳ ಸಂಪತ್ತಿನೊಂದಿಗೆ ಭಾರತದ ಬಿಲಿಯನೇರ್‌ಗಳ ಸಾಲಿನಲ್ಲಿ ಮೂರನೇ ಸ್ಥಾನಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಶೇ.2.43ಕ್ಕೆ ಇಳಿಕೆ
ಕಿಂಗ್‌ಫಿಷರ್‌ನ ದುಬೈ-ಬೆಂಗಳೂರು ವಿಮಾನ ಸದ್ಯಕ್ಕಿಲ್ಲ
ಬಿಲ್‌ ಗೇಟ್ಸ್ ವಿಶ್ವದ ನಂಬರ್ ಒನ್ ಶ್ರೀಮಂತ:ಫೋರ್ಬ್ಸ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಲಾಭದಾಯಕ ಕಾರು ಮತ್ತು ಬೈಕ್ ಪ್ರಶಸ್ತಿ
ವಿಮೆಗಳ ಮೇಲೆ ತೀವ್ರ ನಿಗಾ: ಐಆರ್‌ಡಿಎ