ಹೊಂಡಾ ಸಿಯಲ್ ಕಾರು ತಯಾರಿಕೆ ಸಂಸ್ಥೆ, ಸೆಡಾನ್ ಎಕಾರ್ಡ್‌ನ ಅತ್ಯಾಧುನಿಕ ಆವೃತ್ತಿಯ ಕಾರನ್ನು ಬಿಡುಗಡೆ ಮಾಡಿದ್ದು, ಶೋರೂಂ ಹೊರತುಪಡಿಸಿ 24.8 ರಿಂದ 25.35 ಲಕ್ಷ ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ನೂತನ ಸೆಡಾನ್ ಎಕಾರ್ಡ್ ಕಾರು ವಿ.6.35 ಮತ್ತು ಎಕಾರ್ಡ್ ಇನ್‌ಸ್ಪೈರ್ ಎನ್ನುವ ಎರಡು ಮಾಡೆಲ್‌ಗಳಲ್ಲಿ ಲಭ್ಯವಿದ್ದು, ಯುರೋಪ್‌ನ ಎಮಿಶನ್ ಟೆಸ್ಟಿಂಗ್ ಸಾಮರ್ಥ್ಯವನ್ನು ಹೊಂದಿದೆ. ಸೆಡಾನ್ ಎಕಾರ್ಡ್‌ನ 2.4 ಲೀಟರ್ ಇಂಜಿನ್ ಸಾಮರ್ಥ್ಯದ ಆರಂಭಿಕ ಆವೃತ್ತಿಯ ಕಾರು ನೂತನ ಮಾಡೆಲ್‌ಗಳಿಗಿಂತ ಹೆಚ್ಚಿಗೆ ಮಾರಾಟ ಮಾಡುವ ನಿರೀಕ್ಷೆಯಿದೆ ಎಂದು ಹೊಂಡಾ ಸಿಯಲ್ ಇಂಡಿಯಾದ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಪ್ರಸ್ತುತವಿರುವ ಎಕಾರ್ಡ್ ಕಾರು 2.4 ಲೀಟರ್ ಇಂಜಿನ್ ಸಾಮರ್ಥ್ಯದ180 ಅಶ್ವಶಕ್ತಿಯನ್ನು ಹೊಂದಿದ್ದು, ಆರಂಭಿಕ ಕಾರಿನ ದರ 16.72 ಲಕ್ಷ ರೂಪಾಯಿಗಳಾಗಿವೆ.ಹೊಂಡಾ ಕಂಪೆನಿ ಭಾರತದಲ್ಲಿ ಸಿಯಲ್ ಗ್ರೂಪ್‌ನೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಕಾರುಗಳನ್ನು ತಯಾರಿಸುತ್ತಿದ್ದು, ಪ್ರತಿ ಲೀಟರ್‌ಗೆ 10 ಕಿ.ಮಿ. ಕ್ರಮಿಸಲಿದೆ ಎಂದು ಕಂಪೆನಿಯ ಉಪಾಧ್ಯಕ್ಷ ಸೇನ್ ತಿಳಿಸಿದ್ದಾರೆ. |