ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರ್ತಿ ಸಿಇಒ ಶೇರು ಮಾರಾಟ:ಹೂಡಿಕೆದಾರರಿಗೆ ಆತಂಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿ ಸಿಇಒ ಶೇರು ಮಾರಾಟ:ಹೂಡಿಕೆದಾರರಿಗೆ ಆತಂಕ
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕರು ತಮ್ಮ ಸುರ್ಪದಿಯಲ್ಲಿದ್ದ ಶೇರುಗಳನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಭಾರ್ತಿ ಶೇರುಗಳು ಶೇ.5 ರಷ್ಟು ಇಳಿಕೆ ಕಂಡಿವೆ.

ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಕೊಹ್ಲಿ ,ಮುಕ್ತ ಮಾರುಕಟ್ಟೆಯಲ್ಲಿ ಮಾರ್ಚ್ 6 ರಂದು ಹಾಗೂ 9 ರಂದು 123,000 ಶೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಶೇರುಪೇಟೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಕೊಹ್ಲಿಯವರು ವ್ಯಯಕ್ತಿಕ ಕಾರಣಗಳಿಂದಾಗಿ ಹಾಗೂ ಆಸ್ತಿಯನ್ನು ಖರೀದಿಸಲು ತಮ್ಮ ಶೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಭಾರ್ತಿ ಏರ್‌ಟೆಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಶೇ.6 ರಷ್ಟು ಬೆಲೆಬಾಳುತ್ತಿದ್ದ ಭಾರ್ತಿ ಶೇರುಗಳು ಕೊಹ್ಲಿ ಶೇರುಗಳನ್ನು ಮಾರಾಟ ಮಾಡಿದ ಸುದ್ದಿ ಬಹಿರಂಗವಾಗುತ್ತಿದ್ದಂತೆ ಭಾರ್ತಿ ಶೇರುಗಳು ಶೇ.4.7ಕ್ಕೆ ಇಳಿಕೆಯಾಗಿ ಪ್ರತಿ ಶೇರಿನ ಮುಖಬೆಲೆ 559.9ರೂ.ಗಳಿಗೆ ತಲುಪಿತು.

ಮನೋಜ್ ಕೊಹ್ಲಿ ಮಾರಾಟ ಮಾಡಿದ ಶೇರುಗಳ ಮೊತ್ತ 1.3 ಮಿಲಿಯನ್ ಡಾಲರ್‌ಗಳಾಗಲಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಕೊಹ್ಲಿ ತಮ್ಮಲ್ಲಿದ್ದ ಶೇರುಗಳನ್ನು ಅನಿರೀಕ್ಷಿತವಾಗಿ ಮಾರಾಟ ಮಾಡಿದ್ದೇಕೆ ಎನ್ನುವುದು ಹೂಡಿಕೆದಾರರ ಚಿಂತನೆಗೆ ಕಾರಣವಾಗಿದೆ ಎಂದು ಟಾರಸ್ ಅಸೆಟ್‌ ಮ್ಯಾನೇಜ್‌ಮೆಂಟ್‌ನ ಆರ್.ಕೆ ಗುಪ್ತಾ ಹೇಳಿದ್ದಾರೆ.

ಸತ್ಯಂ ಕಂಪ್ಯೂಟರ್ ವಂಚನೆ ಸೇರಿದಂತೆ ಇತರ ಕಾರ್ಪೋರೇಟ್‌ ಹಗರಣಗಳಿಂದಾಗಿ ಆತಂಕದಲ್ಲಿರುವ ಹೂಡಿಕೆದಾರರು ಭಾರ್ತಿ ಏರ್‌ಟೆಲ್ ಕಂಪೆನಿಯ ಸಿಇಒ ತಮ್ಮಲ್ಲಿರುವ ಎಲ್ಲ ಶೇರುಗಳನ್ನು ಮಾರಾಟ ಮಾಡಿರುವ ಹಿಂದಿನ ಮರ್ಮವೇನು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರ್‌ಸಂಪರ್ಕ ಶುಲ್ಕವನ್ನು ಕಡಿತಗೊಳಿಸಲಾಗುವುದು ಎಂದು ಟ್ರಾಯ್ ಘೋಷಿಸಿದ ಹಿನ್ನಲೆಯಲ್ಲಿ ಭಾರ್ತಿ ಏರ್‌ಟೆಲ್ ಶೇರುಗಳು ಒತ್ತಡದಲ್ಲಿರುವುದರಿಂದ ಹೂಡಿಕೆದಾರರು ನಷ್ಟವನ್ನು ಎದುರಿಸಲು ಸಿದ್ದವಿಲ್ಲವೆಂದು ಟಾರಸ್ ಅಸೆಟ್‌ ಮ್ಯಾನೇಜ್‌ಮೆಂಟ್‌ನ ಆರ್.ಕೆ ಗುಪ್ತಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಂಡಾದಿಂದ ಅತ್ಯಾಧುನಿಕ ಮಾಡೆಲ್ ಕಾರು ಬಿಡುಗಡೆ
ಮುಕೇಶ್, ಮಿತ್ತಲ್ ಶ್ರೀಮಂತ ಭಾರತೀಯ ಉದ್ಯಮಿಗಳು
ಹಣದುಬ್ಬರ ಶೇ.2.43ಕ್ಕೆ ಇಳಿಕೆ
ಕಿಂಗ್‌ಫಿಷರ್‌ನ ದುಬೈ-ಬೆಂಗಳೂರು ವಿಮಾನ ಸದ್ಯಕ್ಕಿಲ್ಲ
ಬಿಲ್‌ ಗೇಟ್ಸ್ ವಿಶ್ವದ ನಂಬರ್ ಒನ್ ಶ್ರೀಮಂತ:ಫೋರ್ಬ್ಸ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ