ಯಂತ್ರಗಳ ವೈಫಲ್ಯತೆಯಿಂದಾಗಿ ಕಳೆದ ಮೂರು ತಿಂಗಳಿಂದ ಮುಚ್ಚಲ್ಪಟ್ಟಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಕೃಷ್ಣಾ ಗೋದಾವರಿ ಕಚ್ಚಾತೈಲ ಉತ್ಪಾದನ ಕೇಂದ್ರ ತೈಲ ಉತ್ಪಾದನೆಯನ್ನು ಆರಂಭಿಸಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.
ಮಾರ್ಚ್ 8 ರಂದು ಕೃಷ್ಣ ಗೋದಾವರಿ ಬೇಸಿನ್‌ನಿಂದ ಕಚ್ಚಾ ತೈಲ ಉತ್ಪಾದನೆಯನ್ನುಆರಂಭಿಸಲಾಗಿದ್ದು, ಸರಬರಾಜು ವ್ಯವಸ್ಥೆಯಂತ್ರೋಪಕರಣಗಳನ್ನು ಪರಿಕ್ಷೀಸಲಾಗುತ್ತಿದ್ದು ಪ್ರತಿ ನಿತ್ಯ 5 ಸಾವಿರ ಬ್ಯಾರೆಲ್‌ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.
ಮಾಸಾಂತ್ಯಕ್ಕೆ 10 ಸಾವಿರದಿಂದ 12 ಸಾವಿರ ಬ್ಯಾರೆಲ್‌ವರೆಗೆ ಕಚ್ಚಾ ತೈಲವನ್ನು ಉತ್ಪಾದಿಸಲಾಗುವುದು ಎಂದು ರಿಲಯನ್ಸ್ ಪೆಟ್ರೋಕೆಮಿಕಲ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 2008ರಲ್ಲಿ ಆರಂಭವಾದ ಕೃಷ್ಣಾ ಗೋದಾವರಿ ತೈಲ ಉತ್ಪಾದನಾ ಕೇಂದ್ರ 790,000 ಬ್ಯಾರೆಲ್‌ಗಳ ಕಚ್ಚಾ ತೈಲವನ್ನು ಉತ್ಪಾದಿಸಿದ್ದು, ಯಂತ್ರೋಪಕರಣಗಳ ವೈಫಲ್ಯತೆಯಿಂದಾಗಿ ಕಳೆದ ಡಿಸೆಂಬರ್ 9 ರಂದು ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. |