ಲೆನೋವೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ 'ಮಾತೃಭಾಷಾ' ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರ ಮೂಲಕ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಕಂಪ್ಯೂಟರ್ ಕಲಿಕೆಯ ಅವಕಾಶ ಸಿಗಲಿದೆ ಎಂದು ತಿಳಿಸಿದೆ. ಕನ್ನಡ ಸೇರಿದಂತೆ ದೇಶದ 12 ಭಾಷೆಗಳಲ್ಲಿ 'ಲೂಕೀಸ್' ಕಲಿಕಾ ತಂತ್ರಾಂಶದ ನೆರವಿನಿಂದ ಯೋಜನೆ ಅನುಷ್ಠಾನಗೊಳ್ಳಲಿದೆ. |