ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಏರಿಕೆ
PTI
ಏಷ್ಯಾ ಶೇರುಪೇಟೆಗಳ ಚೇತರಿಕೆಯ ಹಿನ್ನೆಲೆಯಲ್ಲಿ ರಫ್ತು ವಹಿವಾಟುದಾರರು ಹಾಗೂ ಬ್ಯಾಂಕ್‌ಗಳು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರಿಗೆ ರೂಪಾಯಿ ಮೌಲ್ಯ 16 ಪೈಸೆ ಏರಿಕೆ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 51.70ರೂಪಾಯಿಗಳಿಗೆ ತಲುಪಿತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 16 ಪೈಸೆ ಏರಿಕೆ ಕಂಡು 51.86/87 ರೂಪಾಯಿಗಳಿಗೆ ತಲುಪಿದೆ.

ಶೇರುಪೇಟೆಯ ಚೇತರಿಕೆಯಿಂದಾಗಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್‌ಇ ಸೂಚ್ಯಂಕ ಹಿಂದಿನ ದಿನದ ವಹಿವಾಟಿನಲ್ಲಿ 183.35 ಪಾಯಿಂಟ್‌ಗಳ ಏರಿಕೆಯೊಂದಿಗೆ ಮುಕ್ತಾಯವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫಾರೆಕ್ಸ್, ರೂಪಾಯಿ, ಮೌಲ್ಯ, ಏರಿಕೆ
ಮತ್ತಷ್ಟು
ಲೆನೋವೊದಿಂದ 'ಮಾತೃಭಾಷಾ' ಕಂಪ್ಯೂಟರ್ ಕಲಿಕಾ ಯೋಜನೆ
ಕೈಗಾರಿಕಾ ಉತ್ಪಾದನೆ ಕುಸಿತ
ರಿಲಯನ್ಸ್ ಕಚ್ಚಾ ತೈಲ ಉತ್ಪಾದನೆ ಆರಂಭ
ಭಾರ್ತಿ ಸಿಇಒ ಶೇರು ಮಾರಾಟ:ಹೂಡಿಕೆದಾರರಿಗೆ ಆತಂಕ
ಹೊಂಡಾದಿಂದ ಅತ್ಯಾಧುನಿಕ ಮಾಡೆಲ್ ಕಾರು ಬಿಡುಗಡೆ
ಮುಕೇಶ್, ಮಿತ್ತಲ್ ಶ್ರೀಮಂತ ಭಾರತೀಯ ಉದ್ಯಮಿಗಳು