ಸತ್ಯಂ ಕಂಪ್ಯೂಟರ್ ಸರ್ವಿಸಸ್ ಖರೀದಿಸಲು ಆಸಕ್ತಿ ತೋರಿದ ಬಿಡ್‌ದಾರರ ವಿವರಗಳನ್ನು ಪರಿಶೀಲಿಸಲು ಅಡಳಿತ ಮಂಡಳಿ ಇಂದು ಸಭೆ ಸೇರಿ ಚರ್ಚಿಸಲಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ.ಸತ್ಯಂ ಸಂಸ್ಥೆ ಖರೀದಿಸಲು ಶೇರುದಾರರಾದ ಲಾರ್ಸನ್ ಆಂಡ್ ಟೌಬ್ರೋ, ಸಾಫ್ಟ್‌ವೇರ್ ಸಂಸ್ಥೆಯಾದ ಟೆಕ್ ಮಹೇಂದ್ರಾ ಮತ್ತು ಬಿ.ಕೆ ಮೋದಿಯವರ ಸ್ಪೈಸ್ ಗ್ರೂಪ್ ಕಂಪೆನಿಗಳು ಅರ್ಜಿ ಸಲ್ಲಿಸಿವೆ ಎಂದು ಕಂಪೆನಿಯ ಅಡಳಿತ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ. ವಂಚನೆ ಪೀಡಿತ ಸತ್ಯಂ ಸಂಸ್ಥೆಯ ಶೇ.51 ರಷ್ಟು ಶೇರುಗಳನ್ನು ಖರೀದಿಸಲು ಬಿಡ್‌ದಾರರಿಗೆ ನಿನ್ನೆ ಸಂಜೆ 5 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿತ್ತು.ಸತ್ಯಂನ ಅಡಳಿತ ಮಂಡಳಿಯ ನಿರ್ದೇಶಕರು ಬಿಡ್‌ದಾರರ ಹಣಕಾಸಿನ ವಿವರಗಳನ್ನು ಪರಿಶೀಲಿಸುತ್ತಿದ್ದು ಇಒಎಲ್ ನಿಯಮದಡಿ ಅರ್ಹತೆ ಪಡೆಯುವ ಬಿಡ್‌ದಾರರು ಸತ್ಯಂನ ಶೇ.51 ರಷ್ಟು ಶೇರುಗಳನ್ನು ಖರೀದಿಸಲು ಅರ್ಹರಾಗುತ್ತಾರೆ ಎಂದು ಕಂಪೆನಿಯ ಅಡಲಿತ ಮಂಡಳಿ ತಿಳಿಸಿದೆ. |