ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಗ್ಲೆಂಡ್‌ ಮೂಲದ ಕಂಪೆನಿ ಖರೀದಿಗೆ ರಿಲಯನ್ಸ್ ಸಿದ್ದತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಗ್ಲೆಂಡ್‌ ಮೂಲದ ಕಂಪೆನಿ ಖರೀದಿಗೆ ರಿಲಯನ್ಸ್ ಸಿದ್ದತೆ
PTI
ಅನಿಲ್ ಧೀರುಭಾಯಿ ಅಂಬಾನಿ ಸಂಚಾಲಿತ ರಿಲಯನ್ಸ್ ಮನಿ ಎಕ್ಸ್‌ಪ್ರೆಸ್, ಇಂಗ್ಲೆಂಡ್ ಮೂಲದ ಮನಿ ಟ್ರಾನ್ಸ್‌ಫರ್‌ ಕಂಪೆನಿ ನಂಬರ್ ಒನ್ ಕರೆನ್ಸಿಯ ಶೇ.51 ರಷ್ಟು ಶೇರುಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಮುಂಬರುವ ಆರು ತಿಂಗಳೊಳಗಾಗಿ 500 ಔಟ್‌ಲೆಟ್‌ಗಳನ್ನು ವಿಸ್ತರಿಸಲು ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ರಿಲಯನ್ಸ್ ಮನಿ ಎಕ್ಸ್‌ಪ್ರೆಸ್ ಕಂಪೆನಿ, ಇಂಗ್ಲೆಂಡ್ ಮೂಲದ ಮನಿ ಟ್ರಾನ್ಸ್‌ಫರ್ ಕಂಪೆನಿಯಾದ ನಂಬರ್ ಒನ್ ಕರೆನ್ಸಿಯ ಶೇ.51 ರಷ್ಟು ಶೇರುಗಳನ್ನು ಖರೀದಿಸಲು ನಿರ್ಧರಿಸಿದ್ದು, ಪ್ರಸಕ್ತ ತಿಂಗಳಾಂತ್ಯದೊಳಗೆ ಒಪ್ಪಂದ ಮುಕ್ತಾಯಗೊಳ್ಳಲಿದೆ. ಕಂಪೆನಿಯ ಔಟ್‌ಲೆಟ್‌ಗಳನ್ನು ಮುಂಬರುವ ಆರು ತಿಂಗಳಲ್ಲಿ 300 ರಿಂದ 500 ಔಟ್‌ಲೆಟ್‌ಗಳನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಿಲಯನ್ಸ್ ಮನಿ ಎಕ್ಸ್‌ಪ್ರೆಸ್ ನಿರ್ದೇಶಕ ಮತ್ತು ಸಿಇಒ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಇಂಗ್ಲೆಂಡ್ ಮೂಲದ ಕಂಪೆನಿ ನಂಬರ್ ಒನ್ ಕರೆನ್ಸಿಯನ್ನು ಎಷ್ಟು ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳಲಾಯಿತು ಎನ್ನುವ ಕುರಿತಂತೆ ವಿವರಗಳನ್ನು ನೀಡಲು ನಿರಾಕರಿಸಿದರು.

ಇಂಗ್ಲೆಂಡ್ ಮೂಲದ ಕಂಪೆನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ವಿದೇಶಿ ವಿನಿಮಯಕ್ಕೆ ವಹಿವಾಟು ವಿಸ್ತರಿಸಿದಂತಾಗಿದ್ದು, ಸ್ವಾಧೀನದ ನಂತರ ರಿಲಯನ್ಸ್ ಮನಿ ಎಕ್ಸ್‌ಪ್ರೆಸ್‌ ಕಂಪೆನಿಯನ್ನು, ರಿಲಯನ್ಸ್ ನಂಬರ್ ಒನ್ ಕರೆನ್ಸಿ ಎಂದು ಹೆಸರು ಬದಲಿಸಲಾಗುವುದು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
65 ಬಿಲಿಯನ್‌ಡಾಲರ್‌ ವಂಚಿಸಿದ ಮಡೋಫ್ ಜೈಲಿಗೆ
ಸತ್ಯಂ ಸಂಸ್ಥೆಯಿಂದ ಬಿಡ್‌ದಾರರ ಅರ್ಜಿ ಪರಿಶೀಲನೆ
ರಿಲಯನ್ಸ್‌ನಿಂದ ವೇಗದ ಅಂತರ್ಜಾಲ ಸೌಲಭ್ಯ
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಏರಿಕೆ
ಲೆನೋವೊದಿಂದ 'ಮಾತೃಭಾಷಾ' ಕಂಪ್ಯೂಟರ್ ಕಲಿಕಾ ಯೋಜನೆ
ಕೈಗಾರಿಕಾ ಉತ್ಪಾದನೆ ಕುಸಿತ