ನ್ಯೂಯಾರ್ಕ್ : ಅಮೆರಿಕ ಸರಕಾರ ಎರಡು ಲಕ್ಷ ಹುದ್ದೆಗಳನ್ನು ತುಂಬಲಿದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತದಿಂದ ಕಂಗಾಲಾದ ಉದ್ಯೋಗಕಾಂಕ್ಷಿಗಳಿಗೆ ಹೊಸತೊಂದು ಆಶಾಕಿರಣ ಮೂಡಿದೆ.
ಶಿಕ್ಷಣ, ಹೆಲ್ತ್ ಕೇರ್ ಮತ್ತಿತರ ವಿಭಾಗಗಳಲ್ಲಿ 9 ಸಾವಿರ ಹುದ್ದೆಗಳಲ್ಲಿ ಹೆಚ್ಚಳ ಮಾಡಿ ಒಟ್ಟು 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ 2007ರಲ್ಲಿ ಒಂದು ಹುದ್ದೆಗೆ ಇಬ್ಬರು ಮಾತ್ರ ಅಕಾಂಕ್ಷಿಗಳಾಗಿದ್ದರು. ಪ್ರಸ್ತುತ ವರ್ಷದಲ್ಲಿ ಒಂದು ಹುದ್ದೆಗೆ ಐದು ಮಂದಿ ಅಭ್ಯರ್ಥಿಗಳು ಅಕಾಂಕ್ಷಿಗಳಾಗಿದ್ದಾರೆ. ಕಂಪೆನಿಗಳು ಪ್ರತಿಭಾವಂತ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ಕುಸಿತದ ಮಧ್ಯೆಯು ಬ್ಯಾಂಕ್‌ಗಳು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುತ್ತಿವೆ ಎಂದು ನಾರ್ಥ್ ಅಮೆರಿಕದ ಅಡೆಕ್ಕೊ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಗ್ ಗಿಲಿಯಂ ತಿಳಿಸಿದ್ದಾರೆ.
ಇಲ್ಲಿಯವರೆಗೆ ನಾವು ಕಾಣದಿದ್ದ ಅನುಭವ ಮತ್ತು ಪ್ರತಿಭೆಯಿರುವ ಉದ್ಯೋಗಕಾಂಕ್ಷಿಗಳಿಗೆ ನಾವು ಹುಡುಕಾಟ ನಡೆಸಿದ್ದೇವೆ ಎಂದು ಗಿಲ್ಡ್ ಮಾರ್ಟ್‌ಗೇಜ್‌ನ ಮುಖ್ಯ ಹಣಕಾಸು ಅಧಿಕಾರಿ ಟೆರ್ರಿ ಶಿಮಿಡ್ ಹೇಳಿದ್ದಾರೆ.
ಅದರಂತೆ ಫಾರ್ಮಾಸಿಸ್ಟ್, ನರ್ಸ್‌ಗಳು ಮತ್ತು ಪಶುವೈದ್ಯರು ಹಾಗೂ ಇಂಜಿನಿಯರ್‌ಗಳಿಗೆ ಬಹುಬೇಡಿಕೆಯಿದೆ ಎಂದು ಮೂಲಗಳು ತಿಳಿಸಿವೆ. |