ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್‌ನ ಶೇ.51 ರಷ್ಟು ಶೇರುಗಳ ಖರೀದಿಗೆ 8 ಮಂದಿ ಬಿಡ್‌ದಾರರು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಸತ್ಯಂ ಮೂಲಗಳು ತಿಳಿಸಿವೆ
ಸತ್ಯಂ ಶೇರುಗಳ ಖರೀದಿಗಾಗಿ 5 ರಿಂದ 8 ಬಿಡ್‌ಗಳಿದ್ದು, ಅದರಲ್ಲಿ ಕೆಲವನ್ನು ಕಡಿತಗೊಲಿಸಿ ಬಿಡ್‌ನ್ನು ಪೂರ್ತಿಗೊಳಿಸಲಾಗುವುದು. ಆದರೆ ಬಿಡ್‌ದಾರರ ವಿವರಗಳನ್ನು ಬಹಿರಂಗಗೊಳಿಸಲು ಅಧಿಕಾರವಿಲ್ಲ ಎಂದು ಸತ್ಯಂ ಅಡಳಿತ ಮಂಡಳಿಯ ಮೂಲಗಳು ತಿಳಿಸಿವೆ
ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು 7800ಕೋಟಿ ರೂಪಾಯಿ ವಂಚಿಸಿರುವುದನ್ನು ಒಪ್ಪಿಕೊಂಡು ರಾಜೀನಾಮೆ ಸಲ್ಲಿಸಿದ ನಂತರ ಶೇರುಪೇಟೆಯಲ್ಲಿ ಸತ್ಯಂ ಶೇರುಗಳು ತೊಳಲಾಟದಲ್ಲಿದೆ.
ಗುರುವಾರದಂದು ಸತ್ಯಂ ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿತ್ತು. ಹೂಡಿಕೆದಾರರು ಮಾರ್ಚ್ 20ರವರೆಗೆ 290 ಮಿಲಿಯನ್ ಡಾಲರ್‌ಗಳ ಅರ್ಹತಾ ಮೊತ್ತವನ್ನು ಸಾಬೀತುಪಡಿಸಬೇಕಾಗಿದೆ
ಎಲ್ ಆಂಡ್ ಟಿ ಸ್ಪೈಸ್ ಗ್ರೂಪ್, ಐಟಿ ಸರ್ವಿಸಸ್ ಟೆಕ್ ಮಹೇಂದ್ರಾ ಮತ್ತು ಐಗೇಟ್ ಕಂಪೆನಿಗಳು ಸತ್ಯಂ ಶೇರುಗಳನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿವೆ. |