ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಿಬಿಐ ವಶ: ನ್ಯಾಯಾಲಯದಿಂದ ರಾಜು ಅರ್ಜಿ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಬಿಐ ವಶ: ನ್ಯಾಯಾಲಯದಿಂದ ರಾಜು ಅರ್ಜಿ ವಜಾ
ಕೇಂದ್ರ ತನಿಖಾ ದಳದ ವಶಕ್ಕೆ ಒಪ್ಪಿಸುವುದನ್ನು ವಿರೋಧಿಸಿ ಸತ್ಯಂ ಮುಖ್ಯಸ್ಥ ಬಿ.ರಾಮಲಿಂಗಾರಾಜು ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಸತ್ಯಂನ ಮಾಜಿ ಸಂಸ್ಥಾಪಕ ಬಿ.ರಾಮಲಿಂಗಾರಾಜು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಕೇಂದ್ರ ತನಿಖೆ ದಳಕ್ಕೆ ಅಗತ್ಯವೆನಿಸಿದಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಮೂರ್ತಿ ಕೆ.ಸಿ.ಭಾನು ಹೇಳಿದ್ದಾರೆ.

ಸತ್ಯಂ ಕಂಪ್ಯೂಟರ್‌ ಸಂಸ್ಥೆಗೆ 7800 ಕೋಟಿ ರೂ. ವಂಚಿಸಿದ ಆರೋಪಿ ಸತ್ಯಂ ರಾಜು ಅವರನ್ನು ಮಾರ್ಚ್ 10 ರಿಂದ 17 ರವರೆಗೆ ಕೇಂದ್ರ ತನಿಖಾ ದಳದ ವಶಕ್ಕೆ ಒಪ್ಪಿಸುವಂತೆ ಸಿಬಿಐ ನ್ಯಾಯಾಲಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ನ್ಯಾಯಾಲಯದ ಆದೇಶದನ್ವಯ ಸಿಬಿಐ ಅಧಿಕಾರಿಗಳು ರಾಮಲಿಂಗಾರಾಜು ಹಾಗೂ ಸಹೋದರ ಮಾಜಿ ಸತ್ಯಂ ವ್ಯವಸ್ಥಾಪಕ ರಾಮಾರಾಜು ಮತ್ತು ಸಿಎಫ್‌ಒ ವಾಡ್ಲಮನಿ ಶ್ರೀನಿವಾಸ್, ಪ್ರೈಸ್ ವಾಟರ್‌ಹೌಸ್‌ನ ಎಸ್.ಗೋಪಾಲಕೃಷ್ಣ ಮತ್ತು ತಲ್ಲೂರಿ ಶ್ರೀನಿವಾಸ್ ಅವರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಬಿಐ, ವಶ, ನ್ಯಾಯಾಲಯ, ರಾಜು, ಅರ್ಜಿ, ವಜಾ
ಮತ್ತಷ್ಟು
ಅಲ್ಯುಮಿನಿಯಂ ಅಮದಿನ ಮೇಲೆ ಸುಂಕ
ಆಪಲ್‌ನಿಂದ ನೂತನ ಐಪಾಡ್
ನಿರುದ್ಯೋಗಿಗಳು ಸ್ವಯಂ ಸೇವಕರಾಗಿ ಪರಿವರ್ತನೆ
ಸತ್ಯಂ ಕಂಪ್ಯೂಟರ್‌ಗೆ 8 ಕಂಪೆನಿಗಳ ಬಿಡ್
ಅಮೆರಿಕದಲ್ಲಿ 2 ಲಕ್ಷ ಉದ್ಯೋಗವಕಾಶ
ಆರ್ಥಿಕ ಕುಸಿತ ತಡೆಗೆ ಸಂಘಟಿತರಾಗಿ:ಒಬಾಮಾ