ದೇಶದ ವಿದೇಶಿ ವಿನಿಮಯ ಮಾರ್ಚ್ 6ಕ್ಕೆ ಅಂತ್ಯಗೊಂಡಂತೆ 1.986 ಬಿಲಿಯನ್ ಕುಸಿತಗೊಂಡಿದೆ ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ.ಹಿಂದಿನ ವಾರದಲ್ಲಿ 249.278 ಬಿಲಿಯನ್ ಡಾಲರ್‌ಗಳಿದ್ದ ವಿದೇಶಿ ವಿನಿಮಯ ಸಂಗ್ರಹ ಪ್ರಸಕ್ತ ವಾರದಲ್ಲಿ 247.292 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.ವಿದೇಶಿ ವಿನಿಮಯ ಸಂಗ್ರಹ ಡಾಲರ್‌ಗಳ ರೂಪದಲ್ಲಿರುವುದರಿಂದ ಯುರೋ, ಸ್ಟೆರ್ಲಿಂಗ್ ಮತ್ತು ಯೆನ್ ಕರೆನ್ಸಿಗಳ ಏರಿಕೆ ಇಳಿಕೆಯಿಂದಾಗಿ ಪರಿಣಾಮ ಬೀರುವ ಸಾಧ್ಯತೆಗಳಿವೆ.ಭಾರತದ ಚಿನ್ನದ ಸಂಗ್ರಹ ಮತ್ತು ಎಸ್‌ಡಿಆರ್ ಪ್ರಸಕ್ತ ವಾರದಲ್ಲಿ ಕೂಡಾ 9746 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, ಯಾವುದೇ ಬದಲಾವಣೆಗಳಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ.ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಲ್ಲಿ ಭಾರತದ ಮೀಸಲು ಸಂಗ್ರಹ 816 ಮಿಲಿಯನ್ ಡಾಲರ್‌ಗಳಿಂದ 818 ಮಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ತಿಳಿಸಿದೆ. |