ಮುಂಬರುವ 2010ರ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.6ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಖ್ಯಾತ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ದೇಶದ ವಿದೇಶಿ ವಿನಿಮಯ ಸಂಗ್ರಹ 2 ಬಿಲಿಯನ್ ಡಾಲರ್‌ಗಳ ಕುಸಿತ ಕಂಡಿದೆ. ಪ್ರಸ್ತುತ ಸಮೀಕ್ಷೆಯಂತೆ ದೇಶದ ಆರ್ಥಿಕ ಅಭಿವೃದ್ಧಿ ದರ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಶೇ.6.1 ರಷ್ಟಾಗಲಿದ್ದು, ನಂತರದ ಅವಧಿಯಲ್ಲಿ ಶೇ.7ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಸ್ಟ್ಯಾಂಡರ್ಡ್ ಆಂಡ್ ಪೂರ್ ಮುಖ್ಯ ಆರ್ಥಿಕ ತಜ್ಞ ಸುಬೀರ್ ಗೋಕರ್ನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ಜಿಡಿಪಿ ದರ ಶೇ.7.1 ರಷ್ಟಾಗಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.ಕೇಂದ್ರ ಸರಕಾರ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳು ಹಾಗೂ ರಿಸರ್ವ್ ಬ್ಯಾಂಕ್‌ನಿಂದ ದರ ಕಡಿತಗಳಿಂದಾಗಿ ಮುಂಬರುವ 6 ರಿಂದ 9 ತಿಂಗಳೊಳಗೆ ಪರಿಣಾಮ ಬೀರಲಿದೆ ಎಂದು ಸುಬೀರ್ ಹೇಳಿದ್ದಾರೆ. ದೇಶದಲ್ಲಿ ಆರ್ಥಿಕ ಕುಸಿತವನ್ನು ತಡೆಯಲು ಮತ್ತಷ್ಟು ಉತ್ತೇಜನ ಪ್ಯಾಕೇಜ್‌ಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ರೆಪೊ ರಿವರ್ಸ್ ರೆಪೊ ದರ ಕಡಿತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. |