ಎಂಟರ್‌ಟೇನ್‌ಮೆಂಟ್ ವಿಭಾಗದ ಪಿರಾಮಿಡ್ ಸೈಮಿರಾ, ಆದಾಯ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಪಿರಾಮಿಡ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ವಯಂ ಘೋಷಿತ ತೆರಿಗೆಯನ್ನು ಪಿರಾಮಿಡ್ ಸೈಮಿರಾ ಪಾವತಿಸದ ಹಿನ್ನೆಲೆಯಲ್ಲಿ ಪಿರಾಮಿಡ್ ಬ್ಯಾಂಕ್ ದಾಖಲೆಗಳನ್ನು ಪರಿಶೀಲಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಆದಾಯ ತೆರಿಗೆ ಇಲಾಖೆಯ ಆರೋಪಗಳನ್ನು ತಳ್ಳಿಹಾಕಿದ್ದು, ನ್ಯಾಯಾಲಯದಲ್ಲಿ ಆದಾಯ ತೆರಿಗೆ ಇಲಾಖೆಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿಕೊಂಡಿದೆ.
ಪಿರಾಮಿಡ್ ಸೈಮಿರಾ ಥೇಟರ್ಸ್ ಲಿಮಿಟೆಡ್ ಪ್ರಕಾರ, ನಾವು ಆದಾಯ ತೆರಿಗೆ ಇಲಾಖೆಗೆ ಬಾಕಿ ಪಾವತಿಸಬೇಕಾಗಿಲ್ಲ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್.ಸಾಮಿನಾಥನ್ ತಿಳಿಸಿದ್ದಾರೆ. |