ವಿಶ್ವಬ್ಯಾಂಕ್ ಗುಂಪಿನ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೋರೇಶನ್, ಮುಂಬರುವ ಜೂನ್ 2009ರೊಳಗೆ 1.08 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಜೂನ್ 2008ರಲ್ಲಿ ಮೂಲಸೌಕರ್ಯ ಯೋಜನೆಗಳಿಗೆ 1.08 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದು, ಪ್ರಸಕ್ತ ವರ್ಷದ ಜೂನ್ 2009ರಲ್ಲಿ ಕೂಡಾ 1.08 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೋರೇಶನ್ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ಸಲಹೆಗಾರ ವಿಪುಲ್ ಭಗತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ಗುಂಪಿನ ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೋರೇಶನ್, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕತೆಯ ಏಳಿಗೆಗಾಗಿ ಖಾಸಗಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ವಹಿವಾಟಿಗೆ ಹಾಗೂ ಸರಕಾರಗಳಿಗೆ ಸಲಹಾ ಸೇವೆಯನ್ನು ನೀಡುತ್ತದೆ.
ಭಾರತದಲ್ಲಿ ಮೂಲಸೌಕರ್ಯ, ಆರ್ಥಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದು ಭಗತ್ ತಿಳಿಸಿದ್ದಾರೆ.
ಇಂಟರ್‌ನ್ಯಾಷನಲ್ ಫೈನಾನ್ಸ್ ಕಾರ್ಪೋರೇಶನ್, ದೇಶದ ಟಾಟಾ ಪವರ್ಸ್‌ನ ಮುಂದ್ರಾ ಪ್ಲ್ಯಾಂಟ್ ಸೇರಿದಂತೆ ಹೈಡ್ರೋ ಮತ್ತು ಟ್ರಾನ್ಸ್‌ಮಿಶನ್ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ. |