ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎನ್‌ಆರ್‌ಇಜಿಎ ಯೋಜನೆಗೆ ವಿಶ್ವಬ್ಯಾಂಕ್ ಟೀಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌ಆರ್‌ಇಜಿಎ ಯೋಜನೆಗೆ ವಿಶ್ವಬ್ಯಾಂಕ್ ಟೀಕೆ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ಎನ್‌ಆರ್‌ಇಜಿಎ) ಆರ್ಥಿಕ ಯೋಜನೆ ಮತ್ತು ಬಡತನ ನಿರ್ಮ‌ೂಲನೆಗೆ ಪೆಟ್ಟು ನೀಡುವ ನೀತಿಯ ಅಡಚಣೆಯಾಗಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಪಟ್ಟಣಗಳ ಯೋಜನೆ ಮತ್ತು ಎನ್ಆರ್‌ಇಜಿಎ ಮುಂತಾದ ಭಾರತ ಸರ್ಕಾರದ ಯೋಜನೆಗಳು, ಜಲಾಯನ ಕಾರ್ಯಕ್ರಮಗಳು ಆಂತರಿಕ ಚಲನೆಗೆ ನೀತಿ ನಿರ್ಬಂಧಗಳಾಗಿವೆ ಎಂದು ವಿಶ್ವ ಅಭಿವೃದ್ಧಿ ವರದಿ 2009ರಲ್ಲಿ ತಿಳಿಸಲಾಗಿದೆ.

ಬಡತನದಿಂದ ಜನರನ್ನು ಮೇಲೆತ್ತಬೇಕಾದರೆ ಗ್ರಾಮಗಳಿಂದ ನಗರಗಳಿಗೆ ವಲಸೆ ಅಗತ್ಯವಾಗಿದೆ ಎಂದು ವರದಿ ವಾದ ಮಂಡಿಸಿದ್ದು, ವಲಸೆ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಬೇಕೆಂದು ಬ್ಯಾಂಕ್ ತಿಳಿಸಿದೆ. ಸರ್ಕಾರದ ನಕಾರಾತ್ಮಕ ಧೋರಣೆ ಮತ್ತು ಜನಸಂಖ್ಯೆ ಚಲನೆಯ ಅನುಕೂಲಗಳ ಬಗ್ಗೆ ಅಜ್ಞಾನದಿಂದ ವಲಸೆಯನ್ನು ಆರ್ಥಿಕ ಅಭಿವೃದ್ಧಿಯ ಶಕ್ತಿ ಎಂದು ಗುರುತಿಸುವಲ್ಲಿ ವಿಫಲವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ನೀತಿ ನಿರೂಪಕರಿಂದ ವಲಸೆಯ ಆರ್ಥಿಕ ಅನುಕೂಲಗಳನ್ನು ಗುರುತಿಸಲಾಗಿಲ್ಲ. ವಾಸ್ತವವಾಗಿ ವಲಸೆಗೆ ಪ್ರತಿಯಾಗಿ ಎರಡು ವಿಧದ ನೀತಿಗಳನ್ನು ಭಾರತದಲ್ಲಿ ಪ್ರಯತ್ನಿಸಲಾಗಿದೆ. ಮೊದಲ ಪ್ರತಿಕ್ರಿಯೆ ಗ್ರಾಮೀಣೋದ್ಯೋಗಗಳ ಹೆಚ್ಚಳವು ಗ್ರಾಮೀಣಪ್ರದೇಶದಿಂದ ಚಲನೆಗೆ ಅಡ್ಡಿಯಾಗುತ್ತದೆ. ಈ ಕ್ರಮಗಳಲ್ಲಿ ಇತ್ತೀಚೆಗೆ ಜಾರಿಗೆ ತಂದ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ ಸೇರಿದೆಯೆಂದು ಅದು ಹೇಳಿದೆ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ವಯಂ ರಕ್ಷಣೆ ನೀತಿಗೆ ಭಾರತ ವಿರೋಧ
ಚಿನ್ನಾಭರಣ ರಫ್ತು ಬೇಡಿಕೆ ಕುಸಿತ
ಸತ್ಯಂ ಖರೀದಿಗೆ ದೇಶ ವಿದೇಶ ಕಂಪೆನಿಗಳ ಆಸಕ್ತಿ
ಐಎಫ್‌ಸಿ:ಭಾರತದಲ್ಲಿ 1.08 ಬಿನ್ ಡಾಲರ್ ಹೂಡಿಕೆ
ಹಣದುಬ್ಬರ ಇಳಿಕೆಯಾಗಿದೆ ದರಗಳಲ್ಲ!
ಪಿರಾಮಿಡ್ ಕಚೇರಿಯ ಮೇಲೆ ಆದಾಯ ತೆರಿಗೆ ದಾಳಿ