ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಟಿ ಕ್ಷೇತ್ರ - 3ವರ್ಷಗಳಲ್ಲಿ ಭಾರತ ನಂ.1: ಇನ್ಫೋಸಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿ ಕ್ಷೇತ್ರ - 3ವರ್ಷಗಳಲ್ಲಿ ಭಾರತ ನಂ.1: ಇನ್ಫೋಸಿಸ್
ಪ್ರಸಕ್ತವಾಗಿ ತಲೆದೋರಿರುವ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಮುಂದಿನ ಮೂರು ವರ್ಷಗಳಲ್ಲಿ ಸಶಕ್ತವಾಗಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಇನ್ಫೋಸಿಸ್ ಸಿಇಓ ಹಾಗೂ ಸಂಸ್ಥೆಯ ಸಹಸ್ಥಾಪಕ ಎಸ್. ಗೋಪಾಲಕೃಷ್ಣನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನದ ಕ್ರಾಂತಿಯಲ್ಲಿ ನಮ್ಮದು ಪ್ರಮುಖ ದೇಶವಾಗಿದೆ. ನಮಗೆ ದೊರೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ನಮ್ಮ ವಿದ್ಯಾಭ್ಯಾಸ ವ್ಯವಸ್ಥೆ ಅದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತಿದೆ. ಆ ನಿಟ್ಟಿನಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಚೇತರಿಕೆ ಕಾಣಲಿಕೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ಜಾಗತಿಕವಾಗಿ ಭಾರತ ದೇಶ ಮಾಹಿತಿ ತಂತ್ರಜ್ಞಾನದ ದಿಗ್ಗಜ ದೇಶವಾಗಿ ಬೆಳೆಯಲಿದೆ, ಏನಿದ್ದರೂ ಎರಡನೇ ಸ್ಥಾನ ಅಮೆರಿಕಕ್ಕೆ. ನಾವು ಜಾಗತಿಕವಾಗಿ ಪ್ರಥಮ ಸ್ಥಾನ ಅಲಂಕರಿಸಲಿದ್ದೇವೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಆರ್ಥಿಕತೆಯಲ್ಲಿ ಬೇಗ ಚೇತರಿಕೆ: ಆರ್‌ಬಿಐ
ಐಸಿಡಬ್ಲುಎಐ ರಾಷ್ಟ್ರೀಯ ಪ್ರಶಸ್ತಿ
ವಿಮಾನ ಇಂಧನ ದರ ಏರಿಕೆ
ಎನ್‌ಆರ್‌ಇಜಿಎ ಯೋಜನೆಗೆ ವಿಶ್ವಬ್ಯಾಂಕ್ ಟೀಕೆ
ಸ್ವಯಂ ರಕ್ಷಣೆ ನೀತಿಗೆ ಭಾರತ ವಿರೋಧ
ಚಿನ್ನಾಭರಣ ರಫ್ತು ಬೇಡಿಕೆ ಕುಸಿತ