ಪ್ರಸಕ್ತ ಸಾಲಿನಲ್ಲಿ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯುವುದಾಗಲಿ ಅಥವಾ ನೌಕರರನ್ನು ಆಸ್ಟ್ರೇಲಿಯಾದಿಂದ ಭಾರತಕ್ಕೆ ವರ್ಗಾಯಿಸುವ ಸಾಧ್ಯತೆ ಇಲ್ಲ ಎಂದು ಆಸ್ಟ್ರೇಲಿಯನ್ ಎಎನ್‌ಝಡ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ.
ಜಾಗತಿಕ ಆರ್ಥಿಕ ಹಿಂಜರಿತದಿಂದ ಕೆಂಗೆಟ್ಟಿದ್ದರೂ ಕೂಡ, ಎಎನ್‌ಝಡ್ ಬ್ಯಾಂಕ್ ವ್ಯವಹಾರ ಎಂದಿನಂತೆ ನಿರಾತಂಕವಾಗಿ ಮುಂದುವರಿಯಲಿದೆ. ಹಾಗೂ 2009ರಲ್ಲಿ ನೌಕರರನ್ನು ಕೆಲಸದಿಂದ ತೆಗೆಯುವ ಯೋಚನೆ ಇಲ್ಲ ಎಂದು ಹೇಳಿದೆ.
ಪ್ರಸಕ್ತ ಸಾಲಿನ ಅಂತ್ಯದಲ್ಲಿ ಮೆಲ್ಬೋರ್ನ್‌ನಿಂದ ನೌಕರರನ್ನು ಭಾರತಕ್ಕೆ ಎಎನ್‌ಝಡ್ ಬ್ಯಾಂಕ್ ವರ್ಗಾಯಿಸುವ ಸಾಧ್ಯತೆ ಇರುವುದಾಗಿ ಕಳೆದ ವಾರ ವರದಿಯೊಂದು ತಿಳಿಸಿತ್ತು.
ಆಸ್ಟ್ರೇಲಿಯಾದಲ್ಲಿ ನೌಕರರನ್ನು ವಜಾಗೊಳಿಸುವ ಕುರಿತಾಗಿ ಅಧಿಕೃತವಾಗಿ ಯಾವುದೇ ಘೋಷಣೆ ನೀಡಿಲ್ಲ ಎಂದು ಬ್ಯಾಂಕ್ ಸೋಮವಾರ ತಿಳಿಸಿದೆ. ಅಲ್ಲದೇ ಈ ಮೊದಲಿನಂತೆಯೇ ಮುಂದೆಯೂ ಕೂಡ ಬ್ಯಾಂಕ್ ತನ್ನ ವಹಿವಾಟು ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. |