ಜಾಗತಿಕವಾಗಿ ಆರ್ಥಿಕ ಹಿಂಜರಿತ ಹಾಗೂ ಮುಂಬೈ ಭಯೋತ್ಪದಾನಾ ದಾಳಿ ಜನರನ್ನು ಕಂಗೆಡಿಸಿದ್ದಕ್ಕಿಂತ ಹೆಚ್ಚಾಗಿ ಭಾರತದಿಂದ ವಿದೇಶಗಳಿಗೆ ಆಗಮಿಸುವ ಪ್ರವಾಸಿಗರಿಗೆ ಹೋಟೆಲ್ ದರಗಳು ಅತಿ ಹೆಚ್ಚಿನ ಅಡ್ಡಿಯನ್ನು ಉಂಟು ಮಾಡಿರುವುದಾಗಿ ಯುರೋಪಿಯನ್ ಪ್ರವಾಸೋದ್ಯಮ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಆರ್ಥಿಕ ಹೊಡೆತ ಹಾಗೂ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತೀಯ ಹೋಟೆಲ್‌ಗಳು ತಮ್ಮ ದರಗಳಲ್ಲಿ ಕಡಿತ ಮಾಡುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ್ದರು. ಆದರೆ ದರ ಕಡಿತ ಆಗದೆ ಇರುವ ಪರಿಣಾಮ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ಮುಂಬೈಯಲ್ಲಿ ನವೆಂಬರ್ 26ರಂದು ನಡೆದ ಉಗ್ರರ ದಾಳಿಯ ನೆನೆಪುಗಳು ಜನರ ಮನದಾಳದಲ್ಲಿ ಹೆಚ್ಚು ಸಮಯ ಇರಲಾರದು. ಆದರೆ ಹೋಟೆಲ್ ದರಗಳು ಮಾತ್ರ ಪ್ರವಾಸಿಗರಿಗೆ ಹೆಚ್ಚಿನ ಅಡ್ಡಿಯನ್ನು ಉಂಟು ಮಾಡುವುದಂತೂ ಸತ್ಯ ಎಂದಿದ್ದಾರೆ. ಆರ್ಥಿಕ ಹಿಂಜರಿತದ ನಡುವೆ ಅನಾವಶ್ಯಕ ಖರ್ಚು-ವೆಚ್ಚಗಳ ಬಗ್ಗೆ ಪ್ರವಾಸಿಗರು ಹೆಚ್ಚಿನ ನಿಗಾ ವಹಿಸುತ್ತಾರೆ ಎಂಬುದು ವಿಯೆನ್ನಾ ಮೂಲದ ಟೂರ್ ನಿರ್ದೇಶಕ ರಿನ್ನರ್ ಐಎಎನ್‌ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಹೋಟೆಲ್‌ಗಳ ದರ ನಿಜಕ್ಕೂ ಪ್ರವಾಸದ್ಯೋಮಕ್ಕೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಮಾರ್ಚ್ 11ರಿಂದ 15ರವರೆಗೆ ಇಲ್ಲಿ ನಡೆದ ಇಂಟರ್‌ನ್ಯಾಶನಲ್ ಟೂರಿಸಂ ಬೋರ್ಸೆ(ಐಟಿಬಿ)ಕಾರ್ಯಕ್ರಮದಲ್ಲಿ ಭಾಗವಹಿಸಿದ ರಿನ್ನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |