ತೈಲ ದರ ಇಳಿಕೆ ಸರಣಿಗೆ ತಡೆ ಹಾಕಿರುವ ಸರ್ಕಾರಿ ಸ್ವಾಮ್ಯದ ಇಂಧನ ಕಂಪೆನಿಗಳು, ವಿಮಾನ ಇಂಧನ ದರವನ್ನು ಪ್ರತಿ ಕಿಲೋ ಲೀಟರ್‌ಗೆ ರೂ. 158ರಷ್ಟು ಏರಿಕೆ ಮಾಡಿದೆ.
ಇದರಿಂದಾಗಿ ಏವಿಯೇಷನ್ ಟೈರ್ಬೈನ್ ಫ್ಯೂಯೆಲ್ (ಎಟಿಎಫ್) ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ಗೆ ರೂ 27,275, ಈ ಮೊದಲು ರೂ.27,106ರಷ್ಟಿತ್ತು. ಹೊಸ ದರ ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಭಾರತೀಯ ತೈಲ ಕಂಪೆನಿಗಳ ಅಧಿಕಾರಿಗಳು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಜಾಗತಿಕವಾಗಿ ತೈಲ ಬೆಲೆ ಕುಸಿದಿರುವ ಕಾರಣದಿಂದಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಈವರೆಗೆ 11ಬಾರಿ ವಿಮಾನ ಇಂಧನ ತೈಲ ಬೆಲೆಯಲ್ಲಿ ಪಬ್ಲಿಕ್ ಸೆಕ್ಟರ್ ತೈಲ ಕಂಪೆನಿಗಳು ಕಡಿತಗೊಳಿಸಿವೆ.
ದೇಶದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣವಾಗಿರುವ ಮುಂಬೈನಲ್ಲಿಯೂ ಎಟಿಎಫ್ ವಿಮಾನ ಇಂಧನ ಬೆಲೆಯನ್ನು ಪ್ರತಿ ಕಿಲೋಗೆ 27,861ರೂ.ನಿಂದ 28,023ರೂ.ಗೆ ಏರಿಸಲಾಗಿದೆ.
ವಿಮಾನ ಇಂಧನದ ಪರಿಷ್ಕೃತ ದರವನ್ನು ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಘೋಷಣೆ ಮಾಡಲಾಗಿತ್ತು, ಇದು ಸ್ಥಳೀಯ ತೆರಿಗೆ ಸೇರಿದಂತೆ ದರ ಅನ್ವಯವಾಗಲಿದೆ ಎಂದು ಎಟಿಎಫ್ ತಿಳಿಸಿದೆ. |