ಪ್ರತಿಷ್ಠಿತ ಲೈಫ್ ಇನ್ಸೂರೆನ್ಸ್ ಕಾರ್ಪೋರೇಶನ್ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಗೃಹಸಾಲದಲ್ಲಿ ಶೇ.0.75ರಷ್ಟು ಬಡ್ಡಿದರವನ್ನು ಕಡಿತ ಮಾಡುವುದಾಗಿ ಸೋಮವಾರ ಪ್ರಕಟಿಸಿದೆ.
ಗ್ರಾಹಕರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಗೃಹ ಸಾಲದ ಬಡ್ಡಿದರದಲ್ಲಿ ಶೇ.0.75 ಕಡಿತ ಮಾಡಿರುವುದಾಗಿ ಎಲ್‌ಐಸಿ ತಿಳಿಸಿದೆ. ಇತ್ತೀಚೆಗೆ ತಮ್ಮ ವಹಿವಾಟಿನಲ್ಲಿ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರ ಕೈಗೊಂಡಿರುವುದಾಗಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್(ಎಲ್‌ಐಸಿಎಚ್‌ಎಫ್‌ಎಲ್)ನ ನಿರ್ದೇಶಕರಾದ ಆರ್.ಆರ್.ನಾಯರ್ ವಿವರಿಸಿದ್ದಾರೆ.
ಈ ಮೊದಲು ಸಾಲಗಾರರಿಗೆ ಶೇ. 11.25 ಬಡ್ಡಿದರದಲ್ಲಿ ಗೃಹ ಸಾಲ ನೀಡಲಾಗುತ್ತಿತ್ತು. ಆದರೆ ಇದೀಗ ಶೇ.10.10.5 ಹಾಗೂ ಶೇ.10.75ದರದಲ್ಲಿ ಸಾಲ ನೀಡಲಾಗುವುದು.
ಅಲ್ಲದೇ ಪ್ರಸಕ್ತ ಸಾಲಿನ ಜನವರಿ ತಿಂಗಳಿನಲ್ಲಿಯೇ ನಾವು ಬಡ್ಡಿ ದರವನ್ನು ಶೇ.1.5ರಷ್ಟು ಇಳಿಕೆ ಮಾಡಲಾಗಿರುವುದಾಗಿ ಹೇಳಿದೆ. ಇನ್ನು ಮುಂದಿನ ಎರಡು ವರ್ಷಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಇಳಿಕೆ ಮಾಡುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದೆ. |