ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಅಮೆರಿಕ ಮುಂದಿನ 2010ರಿಂದ ಚೇತರಿಕೆ ಕಾಣಲಿದೆ ಎಂದು ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಬೆನ್ ಬೆರ್ನಾನ್ಕ್ ಅವರು ತಿಳಿಸಿದ್ದಾರೆ.
ಕಂಗೆಟ್ಟಿರುವ ಆರ್ಥಿಕ ಹಿಂಜರಿತದ ವ್ಯವಸ್ಥೆ ಬಲಪಡಿಸುವಲ್ಲಿ ರಾಜಕೀಯ ಇಚ್ಛಾ ಶಕ್ತಿ ತುಂಬಾ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2010ರಿಂದ ಅಮೆರಿಕದ ಆರ್ಥಿಕ ನಷ್ಟದ ಚೇತರಿಕೆ ಕಾಣಲಿದೆ ಎಂದು ಬೆನ್ ಸಿಬಿಎಸ್‌ಗೆ ನೀಡಿದ ಒಂದು ಗಂಟೆಯ ಸಂದರ್ಶನದಲ್ಲಿ ತಿಳಿಸಿದ ಅವರು, ಆರ್ಥಿಕ ಹಿಂಜರಿತ ಈವರ್ಷದಲ್ಲಿಯೇ ಅಂತ್ಯಗೊಳ್ಳಲಿದೆ ಎಂದರು.
ಅಂದರೆ ನಾವು ಪೂರ್ಣಪ್ರಮಾಣದಲ್ಲಿ ಉದ್ಯೋಗ ನೀಡಲು ಸಮರ್ಥರಾಗುತ್ತೇವೆ ಎಂಬ ಅರ್ಥವಲ್ಲ, ಆದರೆ ಈ ಹೊಡೆತದಲ್ಲಿ ಸಾಕಷ್ಟು ಚೇತರಿಕೆ ಕಾಣುವ ಭರವಸೆ ಇರುವುದಾಗಿ ಹೇಳಿದರು. |