ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ: ತಿಂಗಳಲ್ಲಿ ಕೆಲಸ ಬಿಟ್ಟ 3,500 ನೌಕರರು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ: ತಿಂಗಳಲ್ಲಿ ಕೆಲಸ ಬಿಟ್ಟ 3,500 ನೌಕರರು!
PTI
ಹೈದರಾಬಾದ್: ಕಳಂಕಿತ ಸತ್ಯಂ ಕಂಪ್ಯೂಟರ್ಸ್‌ನಲ್ಲಿ ಇದೀಗ ಕೆಲಸ ಮಾಡುತ್ತಿರುವ ನೌಕರರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದ್ದು, ಕೇವಲ ಕಳೆದ ಒಂದು ತಿಂಗಳಲ್ಲಿ 3,500 ನೌಕರರು ಕೆಲಸ ಬಿಟ್ಟಿದ್ದಾರೆ. ಸತ್ಯಂನ ಹಗರಣ ಜನವರಿ ತಿಂಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆ 47,570 ಮಂದಿ ನೌಕರರ ಸಂಖ್ಯೆ ಇದೀಗ 44,130ಕ್ಕೆ ಇಳಿದಿದೆ. ಕೇವಲ ಕಳೆದ ಒಂದು ತಿಂಗಳಲ್ಲಿ ಈ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎನ್ನುತ್ತವೆ ಮೂಲಗಳು.

ಹಿಂದೆಲ್ಲ ಐಟಿ ವಲಯದಲ್ಲಿ ಕೆಲಸ ಹುಡುಕಲು ಬಹುದೊಡ್ಡ ಕಷ್ಟವೇನೂ ಇರಲಿಲ್ಲ. ಕೆಲವೇ ದಿನಗಳಲ್ಲಿ ಉದ್ಯೋಗಾಂಕ್ಷಿಗಳಿಗೆ ಕೆಲಸ ಸಿಗುತ್ತಿತ್ತು. ಆದರೆ, ಈಗಜಾಗತಿಕ ಆರ್ಥಿಕ ಕುಸಿತದಿಂದಾಗಿ ಪರಿಸ್ಥಿತಿ ಬದಲಾಗಿದೆ. ಎಲ್ಲೆಡೆ ಕೆಲಸ ಖಾಲಿ ಇಲ್ಲ ಎಂಬ ಉತ್ತರವೇ ಬರುತ್ತಿದೆ. ಹಾಗಿದ್ದರೂ, ಸತ್ಯಂ ಹಗರಣ ಬೆಳಕಿಗೆ ಬರುತ್ತಿದ್ದಂತೆ ಉದ್ಯೋಗಾಂಕ್ಷಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ.

ಸತ್ಯಂನಿಂದ ಕೆಲಸ ಕಳೆದುಕೊಳ್ಳವ ಭೀತಿಯಿಂದ ಬಹುತೇಕರು ಕಂಪನಿಯ ಭವಿಷ್ಯದ ಬಗ್ಗೆಯೂ ಯೋಚಿಸಿದೆ, ಪ್ರಾಜೆಕ್ಟ್ ಪೂರ್ಣಗೊಳಿಸುವ ಬಗ್ಗೆಯೂ ತಲೆಕೊಡದೆ ಕೆಲಸ ಹುಡುಕಲು ಆರಂಭಿಸಿಬಿಟ್ಟಿದ್ದರು. ಸತ್ಯಂನ ಯುಎಸ್ ಮೂಲದ ಅಸೋಸಿಯೇಟ್ ಒಬ್ಬರು ಹೇಳುವಂತೆ, ಸತ್ಯಂ ಹಗರಣ ಬೆಳಕಿಗೆ ಬರುತ್ತಿದ್ದಂತೆ ಜನವರಿಯಿಂದಲೇ ಬೇರೆ ಕೆಲಸಕ್ಕಾಗಿ ಪ್ರಯತ್ನಿಸಲು ಶುರು ಮಾಡಿದೆ. ಆಗ ಯಾವುದೂ ವರ್ಕ್ ಔಟ್ ಆಗಲಿಲ್ಲ. ಕೊನೆಗೂ ನಾನು ಉತ್ತಮ ಆಫರ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ಹಾಗಾಗಿ ಈಗ ನಾನು ನೋಟೀಸ್ ಪೀರಿಯಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.

ಆದರೆ, ಬಹುಮುಖ್ಯವಾದ ಪ್ರಾಜೆಕ್ಟ್‌ಗಳನ್ನು ನಿಗದಿತ ಸಮಯದೊಳಗೆ ಮುಗಿಸಲೇ ಬೇಕಾದ ಅನಿವಾರ್ಯತೆಯೂ ಸತ್ಯಂಗಿದೆ. ಆದರೆ ಇದರ ಬಗ್ಗೆ ಯೋಚಿಸದೆ ಬಹುತೇಕರು ಅರ್ಧಕ್ಕೇ ಕಂಪನಿ ತ್ಯಜಿಸಿ ಹೋಗುವಾಗ ಸಂಸ್ಥೆಗೆ ಇದರಿಂದ ಬಹುದೊಡ್ಡ ನಷ್ಟವಾಗುತ್ತಿದೆ. ಸತ್ಯಂನಲ್ಲಿ ಸಿಗುತ್ತಿದ್ದ ಸಂಬಳಕ್ಕಿಂತ ಹೆಚ್ಚಿಗೆ ಬಯಸದೆ, ಅದೇ ಸಂಬಳಕ್ಕೆ ಇನ್ನೊಂದೆಡೆ ಹೋಗುವಾಗ ನೋವಾಗುತ್ತದೆ ಎನ್ನುತ್ತವೆ ಉನ್ನತ ಮೂಲಗಳು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐನಿಂದ ಹೆಚ್ಚುವರಿ ಶೇರು ಖರೀದಿ: ಎಲ್‌ಐಸಿ
ವಿದೇಶಿ ನೇರ ಬಂಡವಾಳದಲ್ಲಿ ಏರಿಕೆ
2010ರಿಂದ ಅಮೆರಿಕ ಆರ್ಥಿಕ ಚೇತರಿಕೆ ಕಾಣಲಿದೆ: ಬೆನ್
ಗೃಹಸಾಲ ಬಡ್ಡಿದರದಲ್ಲಿ ಇಳಿಕೆ: ಎಲ್‌ಐಸಿ
ವಿಮಾನ ಇಂಧನ ದರ ಏರಿಕೆ
ಭಯೋತ್ಪಾದನೆಗಿಂತ ಹೋಟೆಲ್ ದರವೇ ಪ್ರವಾಸೋದ್ಯಮಕ್ಕೆ ಅಡ್ಡಿ!