ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವೆಚ್ಚ ಕಡಿಮೆ ಮಾಡಲು ಬ್ಯಾಂಕುಗಳಲ್ಲಿ ಡಿಜಿಟಲ್ ಸಹಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಚ್ಚ ಕಡಿಮೆ ಮಾಡಲು ಬ್ಯಾಂಕುಗಳಲ್ಲಿ ಡಿಜಿಟಲ್ ಸಹಿ
ಚೆನ್ನೈ: ಒಂದೆಡೆ ಜಾಗತಿಕ ಆರ್ಥಿಕ ಕುಸಿತ, ಇನ್ನೊಂದೆಡೆ ಹೆಚ್ಚಾಗುತ್ತಿರುವ ಬೆಲೆ ಇವೆರಡನ್ನೂ ಸಂಭಾಳಿಸಲು ಬ್ಯಾಂಕುಗಳು ಇದೀಗ ವೆಚ್ಚ ಕಡಿಮೆಗೊಳಿಸಲು ಇದೀಗ ಇನ್ನೂ ಡಿಜಿಟಲೈಜ್ ಆಗಿವೆ. ಎಚ್‌ಡಿಎಫ್‌ಸಿ ಬ್ಯಾಂಕ್, ಸಿಟಿ ಬ್ಯಾಂಕ್ ಮತ್ತು ಎಬಿಎನ್ ಅಮ್ರೋ ಬ್ಯಾಂಕ್‌ಗಳು ಇದೀಗ ಡಾಕ್ಯುಮೆಂಟ್‌ಗಳ ರವಾನೆಗೆ ಡಿಜಿಟಲ್ ಸಹಿಯುಳ್ಳ ತಂತ್ರಜ್ಞಾನವನ್ನು ಬಳಸಲು ಆರಂಭಿಸಿವೆ.

ಅಕೌಂಟ್ ಸೇವಿಂಗ್ಸ್, ಕರೆಂಟ್ ಅಂಡ್ ಕ್ರೆಡಿಟ್ ಕಾರ್ಡ್ ಅಕೌಂಟ್ಸ್, ಈಕ್ವಿಟಿ ಬ್ರೋಕೇಜ್ ಟ್ರಾನ್ಸಾಕ್ಷನ್‌ಗಳಿಗಾಗಿ ಎಲೆಕ್ಚ್ರಾನಿಕ್ ಕಾಂಟ್ರಾಕ್ಟ್ ನೋಟ್ಸ್ ಮತ್ತಿತರ ವಿಷಯಗಳಿಗೆ ಇದೀಗ ಡಿಜಿಟಲ್ ಸಹಿಗಳನ್ನೇ ಬಳಸಲು ಆರಂಭಿಸಿವೆ. ಇದರಿಂದ ಶೇ.90ರಷ್ಟು ಪೇಪರ್ ಬಳಕೆಯಲ್ಲಿ ಉಳಿತಾಯವಾಗುವುದರ ಜತೆಗೆ ಗ್ರಾಹಕರಿಗೂ ಉತ್ತಮ ನಂಬಲರ್ಹ ಸೇವೆ ಸಿಗುತ್ತವೆ ಎನ್ನುತ್ತವೆ ಬ್ಯಾಂಕ್‌ಗಳು.

ಈಗ ಈ ಬ್ಯಾಂಕ್‌ನಿಂದ ಬರುವ ಸ್ಟೇಟ್‌ಮೆಂಟ್‌ಗಳಲ್ಲಿ ಬಲಬದಿಯ ಕೆಳಗೆ ಸಹಿಯ ಜತೆಗೆ ಒಂದು ಹೆಬ್ಬೆರಳ ಗುರುತೂ ನಮೂದಾಗಿರುತ್ತದೆ. ಅದು ಡಿಜಿಟಲ್ ಸಹಿಯಾಗಿದ್ದು, ಅದು ತಾಂತ್ರಿಕವಾಗಿ ಪಡೆದ ಡಾಕ್ಯುಮೆಂಟ್‌ಗಳಲ್ಲಿರುವುದಲ್ಲದೆ, ಅದು ಗ್ರಾಹಕರಿಗೆ ನಂಬಿಕೆಯ ಸಂಕೇತದಂತೆ. ಇದನ್ನು ಯಾರೂ ಅಕ್ರಮವಾಗಿ ನಕಲು ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತವೆ ಬ್ಯಾಂಕುಗಳು.

ಕೈಬರಹದ ಸಹಿಗಳನ್ನು ಯಾರು ಬೇಕಾದರೂ ನಕಲು ಮಾಡಬಹುದು. ಆದರೆ ಆ ಸಹಿಯ ಜತೆಗೆ ಈಗ ಡಿಜಿಟಲ್ ಸಹಿ ಇರುವುದರಿಂದ ಯಾರಿಗೂ ಅದನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಇದು ಗ್ರಾಹಕರಿಗೆ ತಮ್ಮ ಅಕೌಂಟ್ ಬಗ್ಗೆ ನಂಬಿಕೆಯಿಂದಿರಲು ಇನ್ನೂ ಹೆಚ್ಚು ದೃಢತೆಯನ್ನು ನೀಡುತ್ತದೆ ಎನ್ನುತ್ತಾರೆ ಈ ಹೊಸ ತಂತ್ರಜ್ಞಾನ ಸಾಫ್ಟ್‌ವೇರ್ ಸೇವೆಯನ್ನು ಬ್ಯಾಂಕ್‌ಗಳಿಗೆ ನೀಡಿದ ಒಡಿಸಿ ಟೆಕ್ನಾಲಜೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಖ ರಾಬರ್ಟ್ ರಾಜಾ.

ಇದಲ್ಲದೆ ಗ್ರಾಹಕರು ತಮ್ಮ ಅಕೌಂಟ್ ವಿವರಗಳನ್ನು ಕೊರಿಯರ್, ಪೋಸ್ಟ್ ಮೂಲಕ ಪಡೆಯುವುದಕ್ಕಿಂತಲೂ ವೇಗವಾಗಿ ಇಮೇಲ್ ಮೂಲಕ ಈ ಡಿಜಿಟಲ್ ಸಹಿ ಹೊಂದಿದ ಅಕೌಂಟ್ ವಿವರಗಳನ್ನು ಪಡೆಯಲು ಸಾಧ್ಯ. ಇದು ಬ್ಯಾಂಕ್‌ಗಳಿಗೂ ಸುಲಭ. ಗ್ರಾಹಕರಿಗೂ ತಮ್ಮ ಮೇಲ್ ಬಾಕ್ಸ್‌ನಲ್ಲೇ ಕುಳಿತಲ್ಲೇ ನಂಬಲರ್ಹ ಸೇವೆ ಪಡೆಯಬಹುದು. ಜತೆಗೆ ಪೇಪರ್ ಬಳಕೆ ಕಡಿಮೆಯಾಗಿ ಬ್ಯಾಂಕ್‌ಗೆ ಉಳಿತಾಯವೂ ಆಗುತ್ತದೆ ಎನ್ನುತ್ತಾರೆ ರಾಜಾ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ: ತಿಂಗಳಲ್ಲಿ ಕೆಲಸ ಬಿಟ್ಟ 3,500 ನೌಕರರು!
ಎಸ್‌ಬಿಐನಿಂದ ಹೆಚ್ಚುವರಿ ಶೇರು ಖರೀದಿ: ಎಲ್‌ಐಸಿ
ವಿದೇಶಿ ನೇರ ಬಂಡವಾಳದಲ್ಲಿ ಏರಿಕೆ
2010ರಿಂದ ಅಮೆರಿಕ ಆರ್ಥಿಕ ಚೇತರಿಕೆ ಕಾಣಲಿದೆ: ಬೆನ್
ಗೃಹಸಾಲ ಬಡ್ಡಿದರದಲ್ಲಿ ಇಳಿಕೆ: ಎಲ್‌ಐಸಿ
ವಿಮಾನ ಇಂಧನ ದರ ಏರಿಕೆ