ಜಾಗತಿಕವಾಗಿ ತಲೆದೋರಿರುವ ಆರ್ಥಿಕ ಹಿಂಜರಿತದಿಂದ ತಮ್ಮ ಸಂಸ್ಥೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರತಿಷ್ಠಿತ ಕಾರು ತಯಾರಿಕಾ ಕಂಪೆನಿಯಾದ ಫೋರ್ಡ್ ಸ್ಪಷ್ಟಪಡಿಸಿದ್ದು, ಅಲ್ಲದೇ 2010ರ ವೇಳೆಗೆ ಕಂಪೆಯಿಂದ ಸಣ್ಣ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಭಾರತದಲ್ಲಿ ಹೂಡಬೇಕೆಂದಿರುವ 500ಮಿಲಿಯನ್ ಡಾಲರ್ ಯೋಜನೆಗೆ ಯಾವುದೇ ಬಾಧಕ ಇಲ್ಲ, ಅದೇ ತೆರನಾಗಿ 2010ರ ಆರಂಭದಲ್ಲಿಯೇ ಫೋರ್ಡ್ ಕಂಪೆನಿಯ ಸಣ್ಣ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಅದು ಕೂಡ ಸ್ಪರ್ಧಾತ್ಮಕ ದರದಲ್ಲಿಯೇ ಇರಲಿದೆ ಎಂದು ತಿಳಿಸಿದೆ.
ಫೋರ್ಡ್ ಕಂಪೆನಿಯ ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಮೈಕೇಲ್ ಬೋನೆಹಾಮ್ ಅವರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ, ಕಂಪೆನಿ ಘಟಕವನ್ನು ಬೇರೆಡೆ ಸ್ಥಾಪಿಸುವ ಯೋಜನೆ ಕುರಿತು ಚರ್ಚಿಸಲಾಗುತ್ತಿದೆ ಎಂದರು.
ಕಳೆದ ಆರು ತಿಂಗಳಲ್ಲಿ ಆಟೋ ಇಂಡಸ್ಟ್ರಿ ಆರ್ಥಿಕವಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸಿದೆ. ಆದರೂ ನಾವು 2009ರಲ್ಲಿ ಹೆಚ್ಚಿನ ನಷ್ಟವುಂಟಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು. |