ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುರಿದು ಬಿದ್ದ ಸತ್ಯಂ-ಟೆಲ್‌ಸ್ಟ್ರಾ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುರಿದು ಬಿದ್ದ ಸತ್ಯಂ-ಟೆಲ್‌ಸ್ಟ್ರಾ ಒಪ್ಪಂದ
ಮೆಲ್ಬೋರ್ನ್: ಕಳಂಕಿತ ಸತ್ಯಂ ಜತೆಗಿನ ಹೊರಗುತ್ತಿಗೆ ವ್ಯವಹಾರಕ್ಕೆ ಆಸ್ಟ್ರೇಲಿಯಾದ ಖ್ಯಾತ ಕಂಪನಿ ಟೆಲ್‌ಸ್ಟ್ರಾ ತಿಲಾಂಜಲಿ ನೀಡಿದೆ.

ದಿ ಆಸ್ಟ್ರೇಲಿಯನ್ ಎಂಬ ದಿನಪತ್ರಿಕೆ ಸತ್ಯಂ ಜತೆಗೆ ಟೆಲ್‌ಸ್ಟ್ರಾ ತನ್ನ ವ್ಯವಹಾರಕ್ಕೆ ಎಳ್ಳು ನೀರು ಬಿಟ್ಟಿರುವುದನ್ನು ವರದಿ ಮಾಡಿದೆ. ಆದರೆ, ಈ ಬಗ್ಗೆ ಟೆಲ್‌ಸ್ಟ್ರಾ ಸಂಸ್ಥೆ ಇದನ್ನು ಪುಷ್ಟೀಕರಿಸುವ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಆಸ್ಟ್ರೇಲಿಯಾದ ಟೆಲಿಕಾಂ ಉದ್ಯಮದ ದೈತ್ಯ ಕಂಪನಿಯಾಗಿರುವ ಟೆಲ್‌ಸ್ಟ್ರಾ ಸತ್ಯಂ ಜತೆಗೆ 2005ರಿಂದಲೇ ಹೊರಗುತ್ತಿಗೆ ಪಾಲುದಾರಿಕೆ ಹೊಂದಿತ್ತು. 2005ರಲ್ಲಿ 32 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳಿಗೆ ಈ ಎರಡು ಕಂಪನಿಗಳ ನಡುವೆ ಒಪ್ಪಂದ ನಡೆದಿತ್ತು. ಆದರೆ, ಈಗ ಈ ಒಪ್ಪಂದ ಮುರಿಯಲಾಗಿದೆ ಎಂದು ಉನ್ನತ ಮೂಲಗಳ ಹೇಳಿವೆ ಎಂದು ದಿ ಆಸ್ಟ್ರೇಲಿಯನ್ ವರದಿ ಮಾಡಿದೆ.

ಇತ್ತೀಚೆಗಿನ ಸತ್ಯಂ ಹಗರಣವೇ ಇದಕ್ಕೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಜತೆಗೆ ಭಾರತೀಯ ಹೊರಗುತ್ತಿಗೆ ಉದ್ಯಮದ ಇತ್ತೀಚೆಗಿನ ಫಲಿತಾಂಶವೂ ಈ ಸಂಬಂಧ ಮುರಿದು ಬೀಳಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೊಳ್ಳೆ ಕೊಲ್ಲಲು ಲೇಸರ್ ಗನ್!
2010ರಲ್ಲಿ ಸಣ್ಣ ಕಾರು ಮಾರುಕಟ್ಟೆಗೆ: ಫೋರ್ಡ್
ವೆಚ್ಚ ಕಡಿಮೆ ಮಾಡಲು ಬ್ಯಾಂಕುಗಳಲ್ಲಿ ಡಿಜಿಟಲ್ ಸಹಿ
ಸತ್ಯಂ: ತಿಂಗಳಲ್ಲಿ ಕೆಲಸ ಬಿಟ್ಟ 3,500 ನೌಕರರು!
ಎಸ್‌ಬಿಐನಿಂದ ಹೆಚ್ಚುವರಿ ಶೇರು ಖರೀದಿ: ಎಲ್‌ಐಸಿ
ವಿದೇಶಿ ನೇರ ಬಂಡವಾಳದಲ್ಲಿ ಏರಿಕೆ